ಕೇಂದ್ರ ಕೊಟ್ಟ ಹಣವನ್ನ ಲೂಟಿ ಮಾಡಬಾರದು, ಬೇರೆ ಕಡೆಗೆ ಡೈವರ್ಟ್ ಆಗಬಾರದು- ಆರ್.ಅಶೋಕ್ ಎಚ್ಚರಿಕೆ.
05:03 PM Apr 27, 2024 IST
|
prashanth
ಬೆಂಗಳೂರು,ಏಪ್ರಿಲ್,27,2024 (www.justkannada.in): ಕೇಂದರ ಸರ್ಕಾರ ಬರಪರಿಹಾರವಾಗಿ ರಾಜ್ಯಕ್ಕೆ ನೀಡಿರುವ ಹಣವನ್ನ ಲೂಟಿ ಮಾಡಬಾರದು ಬೇರೆ ಕಡೆಗೆ ಡೈವರ್ಟ್ ಆಗಬಾರದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಆರ್.ಅಶೋಕ್, ಕೇಂದ್ರದಿಂದ ಬರಪರಿಹಾರ ಬಿಡುಗಡೆಯಾಗಿದ್ದಕ್ಕೆ ಸ್ವಾಗತ. ಕಾಂಗ್ರೆಸ್ ಗೆ ಹೆದರಿ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ . ಕೆಲ ಕಾನೂನು ತೊಡಕು ನಿವಾರಣೆ ಮಾಡಿ ಪರಿಹಾರ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ತಮಿಳುನಾಡು ಅಸ್ಸಾಂಗೆ ಬಿಡುಗಡೆ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಬರದ ವಿಚಾರವಾಗಿ ರಾಜಕೀಯ ಮಾಡಿದೆ. ರಾಜ್ಯ ಸರ್ಕಾರ ಅಭಿವೃದ್ದಿ ಮಾಡುತ್ತಿಲ್ಲ. ಕಾಂಗ್ರೆಸ್ ಈ ಹಣವನ್ನ ಲೂಟಿ ಮಾಡಬಾರದು. ಯಾವ ಕಡೆಗೂ ಹಣ ಡೈವರ್ಟ್ ಮಾಡಬಾರದು. ಡಿಬಿಟಿ ಮೂಲಕವೇ ರೈತರಿಗೆ ಹಣ ವರ್ಗಾಯಿಸಬೇಕು ಎಂದು ಆರ್ ಅಶೋಕ್ ತಿಳಿಸಿದರು.
Key words: center, money, Drought relief, R. Ashok
Next Article