HomeBreaking NewsLatest NewsPoliticsSportsCrimeCinema

ಚಿನ್ನ, ಬೆಳ್ಳಿ ಮೇಲೆ ಕಸ್ಟಮ್ಸ್ ತೆರಿಗೆ ಕಡಿತ: ಯಾವುದ ಅಗ್ಗ, ಯಾವುದು ತಗ್ಗು..?  ಇಲ್ಲಿದೆ ಮಾಹಿತಿ

01:16 PM Jul 23, 2024 IST | prashanth

ನವದೆಹಲಿ,ಜುಲೈ,23,2024 (www.justkannada.in):  ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಚಿನ್ನ, ಬೆಳ್ಳಿ ಮೇಲಿನ ಕಸ್ಟಮ್ಸ್ ತೆರಿಗೆ ಶೇ 6ರಷ್ಟು ಕಡಿತ ಮಾಡುವುದಾಗಿ ಘೋಷಿಸಿದ್ದಾರೆ.

ಮೊಬೈಲ್ ಮತ್ತು ಚಾರ್ಜರ್ ಗಳ ಮೇಲಿನ ತೆರಿಗೆ ಇಳಿಕೆ., ಮೊಬೈಲ್ ಫೋನ್ ಬಿಡಿಭಾಗಗಳ ಬೆಲೆ ಇಳಿಕೆ ಮಾಡುವುದಾಗಿ ತಿಳಿಸಿದ್ದಾರೆ.  ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು ನೀಡಲಾಗುವುದು. ಈ ನಿಟ್ಟಿನಲ್ಲಿ ಮೊಬೈಲ್ ಫೋನ್, ಬಿಡಿಭಾಗಗಳ ಮೇಲಿನ ತೆರಿಗೆ, ಸೋಲಾರ್ ಪ್ಯಾನಲ್ ಇಳಿಕೆಯಾಗಲಿದೆ ಎಂದು ತಿಳಿಸಿದರು. ಈ ಮೂಲಕ ಮೊಬೈಲ್ ಫೋನ್, ಚಾರ್ಜರ್, ಸೋಲಾರ್ ಪ್ಯಾನಲ್ ಗಳ ಬೆಲೆ ಇಳಿಕೆಯಾಗಲಿದೆ. ವಿದ್ಯುತ್ ತಂತಿ, ಎಕ್ಸರೇ ಮಷಿನ್ ದರ ಇಳಿಕೆ ಬಗ್ಗೆಯೂ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.

ಕ್ಯಾನ್ಸರ್ ಔಷಧಿಗಳು ಅಗ್ಗ

ಮೂರು ಕ್ಯಾನ್ಸರ್ ಔಷಧಗಳ ಮೇಲಿನ ಕಸ್ಟಮ್ ಡ್ಯೂಟಿ ತೆರವುಗೊಳಿಸಲಾಗಿದೆ. ಅಂದರೆ ಈ ಮೂರು ಔಷಧಿಗಳು ಅಗ್ಗವಾಗಲಿವೆ. ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ 6 ರಷ್ಟು ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ರಷ್ಟು ಕಡಿಮೆ ಮಾಡಲಾಗುವುದು ಎಂದು  ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇನ್ನು ಪ್ಲಾಸ್ಟಿಕ್ ಪ್ಲಾಸ್ಟಿಕ್ ಉತ್ಪನ್ನಗಳ ಮೇಲಿನ ತೆರಿಗೆ, ಬ್ರ್ಯಾಂಡೆಡ್ ಬಟ್ಟೆಗಳ ದರ ಹೆಚ್ಚಳ  ಮಾಡಲಾಗಿದೆ.

Key words: Central Budget, Price, increase, decrease, gold

Tags :
Central BudgetDecreasegoldIncrease...price
Next Article