For the best experience, open
https://m.justkannada.in
on your mobile browser.

ಎಂ ಎಸ್ ಪಿ ಖರೀದಿ ಗ್ಯಾರಂಟಿ, ರೈತರ ಸಾಲಮನ್ನಾ ಸೇರಿ ಮತ್ತಿತರ ಯೋಜನೆ ಬಗ್ಗೆ ಫೆ.18ರಂದು ಕೇಂದ್ರ ಸ್ಪಷ್ಟ ಘೋಷಣೆ.

03:23 PM Feb 16, 2024 IST | prashanth
ಎಂ ಎಸ್ ಪಿ ಖರೀದಿ ಗ್ಯಾರಂಟಿ  ರೈತರ ಸಾಲಮನ್ನಾ ಸೇರಿ ಮತ್ತಿತರ ಯೋಜನೆ ಬಗ್ಗೆ ಫೆ 18ರಂದು ಕೇಂದ್ರ ಸ್ಪಷ್ಟ ಘೋಷಣೆ

ನವದೆಹಲಿ,ಫೆಬ್ರವರಿ,16,2024(www.justkannada.in): ಎಂ ಎಸ್ ಪಿ ಖರೀದಿ ಗ್ಯಾರಂಟಿ, ರೈತರ ಸಾಲಮನ್ನಾ, ರೈತರಿಗೆ ಪಿಂಚಣಿ ಮತ್ತಿತರ ಯೋಜನೆ ಬಗೆ ಕೇಂದ್ರ ಸರ್ಕಾರ ಫೆಬ್ರವರಿ 18 ಭಾನುವಾರದಂದು  ಸಭೆಯಲ್ಲಿ ಅಧಿಕೃತವಾಗಿ ಸ್ಪಷ್ಟ ಘೋಷಣೆ ಮಾಡಲಿದೆ ಎಂದು ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕುರುಬೂರು ಶಾಂತಕುಮಾರ್, ಚಂಡಿಗಢದಲ್ಲಿ ನಡೆದ ಕೇಂದ್ರ ಸರ್ಕಾರದ ರೈತ ಮುಖಂಡರ ಸಭೆಯಲ್ಲಿ ಕೇಂದ್ರ ಸಚಿವ ಪಿಯುಷ್ ಗೂಯಲ್, ಕೃಷಿ ಸಚಿವ ಅರ್ಜುನ್ ಮುಂಡ, ರಾಜ್ಯ ಗೃಹ ಸಚಿವ ನಿತ್ಯಾನಂದರಾಯ್, ಪಂಜಾಬ್ ಸಿಎಂ ಭಗವಂತ್ ಮಾನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ಪಂಜಾಬ್ ಹರಿಯಾಣ ಹಾಗೂ ದೇಶಾದ್ಯಂತ ನಡೆಯುತ್ತಿರುವ ರೈತ ಹೋರಾಟದ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ . ಮತ್ತೊಂದು ಸುತ್ತಿನ ಭಾನುವಾರ  ಸಭೆಯಲ್ಲಿ ಅಧಿಕೃತವಾಗಿ ಸ್ಪಷ್ಟ ಘೋಷಣೆ ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ,ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚ ವೆಚ್ಚಕ್ಕೆ ಲಾಭಾಂಶ ಸೇರಿಸಿ ನಿಗದಿ ಮಾಡಬೇಕು, ರೈತರ ಸಂಪೂರ್ಣ ಸಾಲ ಮನ್ನಾ ಆಗಬೇಕು . 60ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ  ಜಾರಿಗೆ ತರಬೇಕು, ಬೆಳೆ ವಿಮಾ ಪದ್ಧತಿ ಬದಲಾಗಿ  ಪ್ರತಿ ರೈತನ ಹೊಲದ ಬೆಳೆ ವಿಮೆ ನೀತಿ ಜಾರಿಯಾಗಬೇಕು.  ಕೃಷಿ ಭೂಮಿ ಭೂಸ್ವಾದಿನ ಪ್ರಕ್ರಿಯೆ ನಿಲ್ಲಬೇಕು ಎಂದು ಒತ್ತಾಯಿಸಿ  ದೆಹಲಿಯಲ್ಲಿ  ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ),ಸಂಘಟನೆಯ  ದೆಹಲಿ ಫಂಜಾಬ ಹರಿಯಾಣ ಸುತ್ತ ಮುತ್ತಲ ಹೋರಾಟದ ಪ್ರಬಲತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಿದೆ.

ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಸಂದೇಶ ರವಾನೆಯಾಗದಂತೆ ತಡೆಯಲು ಇಂಟರ್ನೆಟ್ ,ಟ್ವಿಟ್ಟರ್, ಫೇಸ್ಬುಕ್, ಸೌಲಭ್ಯ ಬಂದ್ ಮಾಡಿರುವುದನ್ನು  ಮರುಸಂಪರ್ಕ ಕಲ್ಪಿಸಲು ಒಪ್ಪಿದೆ.  ರೈತಮುಖಂಡರು  ಸರ್ಕಾರದ ಅಂತಿಮ ಘೋಷಣೆ ತನಕ ಶಾಂತಿಯುತ ಪ್ರತಿಭಟನೆ ನಡೆಸಲು ಒಪ್ಪಿದ್ದಾರೆ. ಹೋರಾಟದಲ್ಲಿ ಭಾಗಿಗಳಾಗಿರುವ ವಿವಿಧ ರೈತ ಸಂಘಟನೆಗಳ 14 ರೈತ ಮುಖಂಡರು, ಮಧ್ಯ ರಾತ್ರಿ ಒಂದು ಗಂಟೆ ತನಕ ಸರ್ಕಾರ ಜೊತೆ ಮಾತುಕತೆಯಲ್ಲಿ ಭಾಗವಹಿಸಿದರು ಎಂದು ಕುರುಬೂರು ಶಾಂತ ಕುಮಾರ್ ತಿಳಿಸಿದರು.

ರಾಷ್ಟ್ರೀಯ ರೈತ ಮುಖಂಡ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಜಗಜಿತ್ ಸಿಂಗ್ ಧಲೆವಾಲ, ಶಿವಕುಮಾರ್ ಕಕ್ಕ, ಶರವಣ ಸಿಂಗ್ ಪಾಂದಾರ್, ಅಶೋಕ್ ಬೋಲಾರಿಯ, ಲಕ್ವಿನ್ಧರ್ ಸಿಂಗ್, ಬಲವಂತ್ ಸಿಂಗ್, ಜರ್ನಲ್ ಸಿಂಗ್, ಮುಂತಾದವರಿದ್ದರು. ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ದಕ್ಷಿಣ ಭಾರತ ಸಂಚಾಲಕ ,ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕಾಗಿ ರೈತರಿಗಾಗಿ ಹಲವಾರು ಯೋಜನೆ ಜಾರಿ ಮಾಡಿದೆ ಎಂದು ಸಚಿವರು ವರದಿ ನೀಡುತ್ತಿದ್ದಾಗ, ಮಧ್ಯಪ್ರವೇಶ ಮಾಡಿ ಮಾತನಾಡಿದ ಕುರುಬೂರು  ಶಾಂತಕುಮಾರ್,  ಅದೆಲ್ಲ ಗೊತ್ತಿದೆ. ನಮ್ಮ ಹೋರಾಟದ ಸಮಸ್ಯೆಯ ಬಗ್ಗೆ ಮಾತನಾಡಿ. ರೈತರ ಕಣ್ಮಣಿ ಮಾಜಿ ಪ್ರಧಾನಿ ಚರಣ್ ಸಿಂಗ್ , ಎಮ್ ಎಸ್ ಸ್ವಾಮಿನಾಥನ್ ರವರಿಗೆ ಭಾರತರತ್ನ ನೀಡಿ ಗೌರವಿಸುತ್ತೀರಿ.  ಇವರ ವರದಿಯನ್ನು ಜಾರಿಗೆ ತರದೆ ನಿರ್ಲಕ್ಷ್ಯತನ ತೋರುತ್ತಿರಿ. ಇದು ಕೇಂದ್ರ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ತಿಳಿಸಿದರು.

Key words: Central -clear announcement - about-farmers-loan waiver- other schemes-Kurubur Shanthakumar

Tags :

.