For the best experience, open
https://m.justkannada.in
on your mobile browser.

ಅನ್ನಭಾಗ್ಯ ಯೋಜನೆಗೆ ಟಕ್ಕರ್:  ಪಡಿತರ ವಿತರಣೆಯಲ್ಲಿ ಹೊಸ ಬಿಲ್ ಪದ್ದತಿ ಜಾರಿಗೆ ಮುಂದಾದ ಕೇಂದ್ರ ಸರ್ಕಾರ.

12:30 PM Nov 21, 2023 IST | prashanth
ಅನ್ನಭಾಗ್ಯ ಯೋಜನೆಗೆ ಟಕ್ಕರ್   ಪಡಿತರ ವಿತರಣೆಯಲ್ಲಿ ಹೊಸ ಬಿಲ್ ಪದ್ದತಿ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ,ನವೆಂಬರ್,21,2023(www.justkannada.in): ರಾಜ್ಯ  ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಟಕ್ಕರ್ ಕೊಡಲು ಕೇಂದ್ರ ಸರ್ಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯಲ್ಲಿ ಹೊಸ ಬಿಲ್ ಪದ್ದತಿ ಜಾರಿಗೆ ಮುಂದಾಗಿದೆ.

ಹೌದು ರಾಜ್ಯದಲ್ಲಿ ಗ್ರಾಹಕರಿಗೆ ಪಡಿತರ ವಿತರಣೆ ವೇಳೆ ಹೊಸ ಪ್ರಿಂಟೆಡ್ ಬಿಲ್ ವ್ಯವಸ್ಥೆ ಜಾರಿ ಮಾಡುತ್ತಿದೆ. ಬಿಲ್ ನಲ್ಲಿ  ವಿತರಣೆ ಮಾಡುವ ಅಕ್ಕಿಯ ವಿವರದ ಜೊತೆಗೆ ಜನರಿಗೆ ನೀಡುವ ಪಡಿತರ ಅಕ್ಕಿ ಕೇಂದ್ರ ಸರ್ಕಾರದ ಅನುದಾನ ಎಂದು ಮುದ್ರಣ ಮಾಡಲಾಗುತ್ತಿದೆ.  ಇದಕ್ಕೂ ಮೊದಲು ಪಡಿತರ ವಿತರಣೆ ವೇಳೆಯಲ್ಲಿ ಕೈನಲ್ಲಿ ಬರೆದಿದ್ದ ಬಿಲ್ ವಿತರಣೆ ಮಾಡಲಾಗುತ್ತಿತ್ತು. ಹೊಸ ಬಿಲ್ ವ್ಯವಸ್ಥೆಯಿಂದಾಗಿ ಅಕ್ಕಿ ವಿತರಣೆಯ ಅಕ್ರಮಕ್ಕೂ ಕೂಡ ಕಡಿವಾಣ ಹಾಕಲಿದೆ.

ಅಕ್ಕಿಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅನುದಾನ ಎಷ್ಟು ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಅನುದಾನ ಎಷ್ಟು ಎನ್ನುವುದನ್ನ  ಹೊಸ ಬಿಲ್ ನಲ್ಲಿ ವಿವರವಾಗಿ ಮುದ್ರಿಸಲಾಗುತ್ತದೆ.  ಜೊತೆಗೆ ಕುಟುಂಬದಲ್ಲಿ ಎಷ್ಟು ಸದಸ್ಯರಿದ್ದಾರೆ, ಎಷ್ಟು ಕೆಜಿ ಅಕ್ಕಿ, ಎಷ್ಟು ಕೆಜಿ ರಾಗಿ ಅಥವಾ ಜೋಳ ವಿತರಣೆಯಾಗಿದೆ ಅದಕ್ಕೆ ತಗುಲುವ ಮೊತ್ತವೆಷ್ಟು ಎಂಬುದು ಕೂಡ ಬಿಲ್ ನಲ್ಲಿ ದಾಖಲಾಗಲಿದೆ.

Key words: central government - implement - new bill -system -distribution -rations.

Tags :

.