ಮೈಸೂರು ಮಳೆ : CESCOM ವ್ಯಾಪ್ತಿಯಲ್ಲಿ ಬರೋಬ್ಬರಿ 2 ಕೋಟಿ ರೂ. ನಷ್ಟ..!
ಮೈಸೂರು, ಮೇ. 06, 2024 : (www.justkannada.in news ) ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಗುಡುಗು, ಬಿರುಗಾಳಿ ಸಹಿತ ಮಳೆಗೆ ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲ್ಲಕ್ಕುರುಳಿದರೆ, ಟ್ರಾನ್ಸ್ ಫಾರ್ಮಾರ್ ಸುಟ್ಟು ಸೆಸ್ಕಾಂಗೆ ಅಂದಾಜು 2 ಕೋಟಿ ರೂ. ನಷ್ಟ ಸಂಭವಿಸಿದೆ.
ವರ್ಷದ ಮೊದಲ ಮಳೆ ಎಂದೇ ಪರಿಗಣಿಸಲ್ಪಟ್ಟ ಶುಕ್ರವಾರದ ಮಳೆ ಬಿದ್ದದ್ದು ಕೆಲವೇ ಕೆಲ ಸಮಯವಾದರು, ಅದರಿಂದ ಉಂಟಾದ ನಷ್ಟ ಮಾತ್ರ ಕೋಟಿ ಮೀರಿಸಿದೆ. ವರುಣನ ಜತೆಗೆ ಗಾಳಿಯೂ ಬಿರುಗಾಳಿಯಂತೆ ಸೇರಿದ ಪರಿಣಾಮ ನಷ್ಟದ ಪ್ರಮಾಣ ಹೆಚ್ಚಾಗಿಯೇ ಉಂಟಾಗಿದೆ ಎಂದು ಸೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ತಿಳಿಸಿದರು.
ಜಸ್ಟ್ ಕನ್ನಡ ಜತೆ ಮಾತನಾಡಿದ ಅವರು ಹೇಳಿದಿಷ್ಟು..
ಶುಕ್ರವಾರದ ಮಳೆಗೆ ಸೆಸ್ಕಾಂ ವ್ಯಾಪ್ತಿಯ ೫ ಜಿಲ್ಲೆಗಳಲ್ಲಿ ಒಟ್ಟು ೧೫೦೦ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ೪೦ ಟ್ರಾನ್ಸ್‌ಫಾರ್ಮರ್(ಟಿಸಿ) ಸುಟ್ಟುಹೋಗಿವೆ. ಈ ಪರಿಣಾಮ ವಿದ್ಯುತ್ ಪೂರೈಕೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಇದರಿಂದ ಸೆಸ್ಕ್‌ಗೆ ಅಂದಾಜು ೨ ಕೋಟಿ ರೂ. ನಷ್ಟವಾಗಿದೆ.
ಮಳೆ ಜತೆಗೆ ವೇಗವಾಗಿ ಗಾಳಿ ಬೀಸಿದ ಕಾರಣ ಮರದ ರೆಂಬೆ-ಕೊಂಬೆ ವಿದ್ಯುತ್ ತಂತಿ ಮೇಲೆ ಬಿದ್ದು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ನಗರ ಪ್ರದೇಶ ಹಾಗೂ ಗ್ರಾಮಾಂತರ ಭಾಗ ಸೇರಿ ಜಿಲ್ಲೆಯಲ್ಲಿ ಒಟ್ಟು ೧೫೦೦ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದಾಗಿ ೪೦ ಕಡೆಗಳಲ್ಲಿ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿವೆ. ಇದರಿಂದಾಗಿ ಸೆಸ್ಕಾಂ ವ್ಯಾಕ್ತಿಯಲ್ಲಿ ಅಂದಾಜು ೨ ಕೋಟಿ ರೂ. ನಷ್ಟವಾಗಿದೆ ಎಂದರು.
ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ನಾಲ್ಕು ಕಡೆ ಮರದ ರೆಂಬೆ ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಇದೊಂದೇ ರಸ್ತೆಯಲ್ಲಿಒಟ್ಟು 12 ವಿದ್ಯುತ್ ಕಂಬಗಳು ಮುರಿದಿದೆ .
ಕಂಬಗಳು ಬಿದ್ದಿರುವ ಸ್ಥಳದ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು . ಇದರಿಂದ ಶುಕ್ರವಾರ ಮತ್ತು ಶನಿವಾರ ಕೆಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ಈದೀಗ ಸೆಸ್ಕಾಂ ಸಿಬ್ಬಂದಿಗಳ ಅವಿರತ ಶ್ರಮದ ಪರಿಣಾಮ ಶೇ.೧೦೦ ರಷ್ಟು ದುರಸ್ತಿ ಕಾರ್ಯ ಸಂಪೂರ್ಣಗೊಂಡಿದೆ. ಎಲ್ಲ ಮಾರ್ಗಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಸೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ತಿಳಿಸಿದರು.
KEY WORDS: CESC, staff, Mysuru, restore power
SUMMARY :
Chamundeshwari Electricity Supply Corporation (CESC) were pressed into restoration works after hundreds of trees and electricity poles were uprooted in the city in the Friday’s heavy downpour resulting in several areas plunging into complete darkness for hours together.
While more than 1,000 electricity poles were uprooted due to thunderstorms and thunderstorms in the city on Friday evening, a transformer was burnt and an estimated loss of Rs 2 crore was incurred to CESSCOM. A loss has occurred.
Friday's rain, considered to be the first rain of the year, took only a short span of time and the losses incurred have exceeded crores of rupees. Sheela, managing director of Cescom, said the losses were high as the wind stormed along with Rain.