For the best experience, open
https://m.justkannada.in
on your mobile browser.

ಚಾಮುಂಡೇಶ್ವರಿ ಪ್ರಾಧಿಕಾರ ಸಭೆಗೆ ವಿರೋಧ: ಕಾನೂನಿನ ಹೋರಾಟ ಮುಂದುವರಿಕೆ - ಸಂಸದ ಯದುವೀರ್

03:09 PM Sep 03, 2024 IST | prashanth
ಚಾಮುಂಡೇಶ್ವರಿ ಪ್ರಾಧಿಕಾರ ಸಭೆಗೆ ವಿರೋಧ  ಕಾನೂನಿನ ಹೋರಾಟ ಮುಂದುವರಿಕೆ   ಸಂಸದ ಯದುವೀರ್

ಮೈಸೂರು,ಸೆಪ್ಟಂಬರ್,3,2024 (www.justkannada.in): ಚಾಮುಂಡೇಶ್ವರಿ ಪ್ರಾಧಿಕಾರ ವಿರೋಧಿಸಿ ಮುಂದಿನ ದಿನಗಳಲ್ಲ ಕಾನೂನಿನ ಹೋರಾಟ ಮಾಡುತ್ತೇವೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಚಾಮುಂಡಿ ಬೆಟ್ಟ ಪ್ರಾಧಿಕಾರದ ಮೊದಲ ಸಭೆ ಹಿನ್ನೆಲೆ ಸಿಎಂ ನಡೆ ಖಂಡಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಸದ ಯದುವೀರ್, ಪ್ರಾಧಿಕಾರದ ಸಭೆಗೆ ಕೋರ್ಟ್ ತಡೆಯಾಜ್ಞೆ ಇದ್ದರೂ ಸಭೆ ಮಾಡಲು ಸಿಎಂ ಮುಂದಾಗಿದ್ದಾರೆ. ಈ ಸಭೆಗೆ ನಾನು ಭಾಗವಹಿಸಿಲ್ಲ. ಇವರು ಮಾಡುತ್ತಿರುವ ಸಭೆ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ . ಸೆಪ್ಟಂಬರ್ 5 ರವರೆಗೂ ಕೋರ್ಟ್ ತಡೆಯಾಜ್ಞೆ ಆದೇಶ ನೀಡಿದೆ. ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಲು ಸೂಚಿಸಿದೆ. ಈಗ ಮುಂದಿನ ದಿನಗಳಲ್ಲಿ ನಾವು ಕಾನೂನಿನ ಹೋರಾಟ ಮುಂದುವರಿಸುತ್ತೇವೆ. ಪ್ರಾಧಿಕಾರವನ್ನ ವಿರೋಧಿಸಿ ನಾವು ನ್ಯಾಯಾಲಯದಲ್ಲಿ ನಾವು ಚಾಲೆಂಜ್ ಮಾಡುತ್ತೇವೆ‌. ದೇವಾಲಯ, ಮಸೀದಿ, ಚರ್ಚ್ ಗಳಿಗೆ ಪ್ರಾಧಿಕಾರ ಮಾಡುವುದು ಸೂಕ್ತ ಅಲ್ಲ ಎಂದರು.

ಪ್ರಾಧಿಕಾರದ ರಚನೆಯಿಂದ ನಮ್ಮ ಮೂಲ ಧಾರ್ಮಿಕ ನಂಬಿಕೆ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ. ನಾವು ಧಾರ್ಮಿಕ ಹಕ್ಕುಗಳನ್ನು ಯಾರಿಗೂ ಬಿಟ್ಟು ಕೊಟ್ಟಿಲ್ಲ. ಅದರ ಬಗ್ಗೆ ನಾವು ಹೋರಾಟ ಮಾಡುತ್ತೇವೆ. ಜನಪ್ರತಿನಿಧಿಯಾಗಿ ಮುಂದುವರಿಯುವ ಜೊತೆಗೆ ನಮ್ಮ ಧರ್ಮ ನಂಬಿಕೆ ಹಕ್ಕು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ‌. ದೇವಾಲಯ ಹುಂಡಿ ಹಣ ದೇವಾಲಯಗಳಿಗೆ ಬಳಕೆ ಆಗಬೇಕು ಎಂದು ಸಂಸದ ಯದುವೀರ್ ಹೇಳಿದರು.

Key words: Chamundeshwari Authority, meeting, Legal fight, MP Yaduveer

Tags :

.