For the best experience, open
https://m.justkannada.in
on your mobile browser.

ಯಾರದ್ದೋ ಹೇಳಿಕೆ ಆಧರಿಸಿ ಪ್ರಾಧಿಕಾರದ ಸಭೆ ಮುಂದೂಡಲು ಸಾಧ್ಯವಿಲ್ಲ- ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

11:18 AM Sep 03, 2024 IST | prashanth
ಯಾರದ್ದೋ ಹೇಳಿಕೆ ಆಧರಿಸಿ ಪ್ರಾಧಿಕಾರದ ಸಭೆ ಮುಂದೂಡಲು ಸಾಧ್ಯವಿಲ್ಲ  ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಮೈಸೂರು,ಸೆಪ್ಟಂಬರ್,3,2024 (www.justkannada.in): ಇಂದು ನಡೆಯಲಿರುವ ಶ್ರೀ ಚಾಮುಂಡಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ,  ಕಾನೂನಾತ್ಮಕವಾಗಿ ನಾನು ಸಭೆ ಮಾಡುತ್ತಿದ್ದೇನೆ. ಯಾರದ್ದೊ ಹೇಳಿಕೆ ಆಧಾರಿಸಿ ಸಭೆ ಮಾಡಲು ಆಗುವುದಿಲ್ಲ, ಸಭೆ ಮುಂದೂಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ  ಸಿಎಂ ಸಿದ್ದರಾಮಯ್ಯ, ಸಂಸದ ಯದುವೀರ್ ಹೇಳಿಕೆ ಮುಖ್ಯವೋ ಕಾನೂನು ಮುಖ್ಯಯೋ. ನಾನು ಕಾನೂನು ಪ್ರಕಾರವೇ ಇವತ್ತಿನ ಸಭೆ ಮಾಡುತ್ತಿತ್ತೇನೆ. ಕೋರ್ಟ್ ನಲ್ಲಿ ತಡೆಯಾಜ್ಞೆ ತೆರವು ಆಗಿದೆ. ಹೀಗಾಗಿ ಇಂದು ಮೊದಲ ಸಭೆ ಮಾಡುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ

ಮುಡಾ ಮಾಜಿ ಆಯುಕ್ತ ದಿನೇಶ್ ಅಮಾನತು ವಿಚಾರ ನನಗೆ ಗೊತ್ತಿಲ್ಲ.

ಮುಡಾ ಮಾಜಿ ಆಯುಕ್ತ ದಿನೇಶ್ ಅಮಾನತು ವಿಚಾರ ನನಗೆ ಗೊತ್ತಿಲ್ಲ. 2009ರ ಹಿಂದಿನ ಬಡಾವಣೆಗೆ 50:50 ಅನ್ವಯ ಆಗುವುದಿಲ್ಲ ಎಂಬ ಅಂಶ ಉಲ್ಲೇಖದ ಬಗ್ಗೆ ನನಗೆ ಮಾಹಿತಿ ಇಲ್ಲ. ಮೊದಲು ಆದೇಶ ನೋಡುತ್ತೇನೆ. ಆದರ ಆದೇಶದ ಅಂಶಗಳು ಏನು ಎಂಬುದು ಸಹ ಗೊತ್ತಿಲ್ಲ. ಗೊತ್ತಿಲ್ಲದನ್ನ ನಾನು ಹೇಗೆ ವಿವರವಾಗಿ ಹೇಳಲಿ. ಆದೇಶದಲ್ಲಿ ಏನಿದು ಎಂಬುದನ್ನ ನೋಡಿ ಆ ಮೇಲೆ ಅದರ ಬಗ್ಗೆ ಮಾತನಾಡುತ್ತೇನೆ. ಅಮಾನತು ಮಾಡಿರುವುದು ಮಾತ್ರ ಗೊತ್ತಿದೆ.  ಇಬ್ಬರು ಆಯುಕ್ತರ ಪಾತ್ರ ಏನಿದೆ ಎಂಬುದು ತನಿಖಾ ವರದಿಯಲ್ಲಿ ತಿಳಿಯಲಿದೆ. ಒಬ್ಬರನ್ನ ಯಾಕೇ ಅಮಾನತು ಮಾಡಿದ್ದೀರಾ, ಹಿಂದಿನ ಆಯುಕ್ತ ನಟೇಶ್ ರನ್ನ ಯಾಕೆ ಅಮಾತು ಮಾಡಿಲ್ಲ ಎಂಬುದಕ್ಕೆ ವರದಿ ಬರದೆ ಹೇಗೆ ಉತ್ತರ ಕೊಡಲಿ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.

ಕುಂಬಳಕಾಯಿ‌ಕಳ್ಳ ಅಂದ್ರೆ ಅವನು ಯಾಕೆ ಹೆಗಲು ಮುಟ್ಟಿ ನೋಡಿ ಕೊಳ್ಳಬೇಕು.

ಕೋವಿಡ್ ಹಗರಣದ ತನಿಖಾ ವರದಿ ಸ್ವೀಕಾರ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಬುಧವಾರ ಕ್ಯಾಬಿನಟ್ ಮುಂದೆ ವರದಿ ಮಂಡಿಸುತ್ತೇನೆ. ಅಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ಹೇಳುತ್ತೇನೆ. ವರದಿಯಲ್ಲಿ ಏನಿದೆ ಎಂಬುದನ್ನ ನಾನು ನೋಡಿಲ್ಲ. ಎಷ್ಟು ಪ್ರಮಾಣದ ಭ್ರಷ್ಟಾಚಾರ ಆಗಿದೆ ಎಂಬುದು ಇನ್ನು ಗಮನಕ್ಕೆ ಬಂದಿಲ್ಲ. ನನ್ನ ಗಮನಕ್ಕೆ ಬರದೆ ಡಿ.ಸುಧಾಕರ್ ಗೆ ಈ ಬಗ್ಗೆ ಯಾರು ಮಾಹಿತಿ ಕೊಟ್ಟರು. ಕುಂಬಳಕಾಯಿ‌ಕಳ್ಳ ಅಂದ್ರೆ ಅವನು ಯಾಕೆ ಹೆಗಲು ಮುಟ್ಟಿ ನೋಡಿ ಕೊಳ್ಳಬೇಕು. ಅವನಿಗೆ ಇದು ಸುಳ್ಳು ವರದಿ ಎಂದು ಹೇಗೆ ಗೊತ್ತಾಗುತ್ತೆ.? ಸುಧಾಕರ್ ತಪ್ಪು ಮಾಡಿರುವುದು ಅವನಿಗೆ ಮಾನಸಿಕವಾಗಿ ಗೊತ್ತಿದೆ. ಹೀಗಾಗಿ ಅವನು ಆ ರೀತಿ ಮಾತನಾಡುತ್ತಿದ್ದಾನೆ ಎಂದು ಹೇಳಿದರು.

Key words: Chamundeshwari Authority, Meeting, statement, CM Siddaramaiah

Tags :

.