For the best experience, open
https://m.justkannada.in
on your mobile browser.

ನರೇಂದ್ರ ಮೋದಿಯನ್ನ ಕೊಂಡಾಡಿದ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್.

04:34 PM Jun 07, 2024 IST | prashanth
ನರೇಂದ್ರ ಮೋದಿಯನ್ನ ಕೊಂಡಾಡಿದ ಚಂದ್ರಬಾಬು ನಾಯ್ಡು  ನಿತೀಶ್ ಕುಮಾರ್

ನವದೆಹಲಿ,ಜೂನ್,7,2024 (www.justkannada.in): 18 ಲೋಕಸಭೆ ನಾಯಕರಾಗಿ ನರೇಂದ್ರ ಮೋದಿ ಆಯ್ಕೆಯಾಗಿದ್ದು ಜೂನ್ 9 ರಂದು ಸಂಜೆ 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಮಧ್ಯೆ ಇಂದು ನಡೆದ ಎನ್ ಡಿಎ ಸಂಸದೀಯ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್ ಕೊಂಡಾಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಚಂದ್ರಬಾಬು ನಾಯ್ಡು, ಮೋದಿ ಅವರು ಆಂಧ್ರಕ್ಕೆ  ಬಂದು ಪ್ರಚಾರ ಮಾಡಿದರು 3 ತಿಂಗಳು ನಿರಂತರವಾಗಿ ಪ್ರಚಾರ ಮಾಡಿದರು. ಅಮಿತ್ ಶಾ ಆಂಧ್ರದಲ್ಲಿ ಮಾಡಿದ ಪ್ರಚಾರ ಹೊಸ ಅಲೆ ಸೃಷ್ಠಿಸಿತು ಭಾರತವನ್ನ ಜಾಗತಿಕ ಶಕ್ತಿಯಾಗಿಸಲು ಮೋದಿ ಶ್ರಮಪಡುತ್ತಿದ್ದಾರೆ. ದೇಶದ ತಲಾದಾಯ ಹೆಚ್ಚಳವಾಗಿದ. ಅಭಿವೃದ್ದಿ ಕುರಿತು ಮೋದಿಗೆ ದೂರದೃಷ್ಠಿ ಇದೆ. ಮೋದಿಯಿಂದ ಮಾತ್ರ ಬಡತನ ಮುಕ್ತ ಸಾಧ್ಯ.  ಟಿಡಿಪಿಯಿಂದ ಮೋದಿಗೆ ಬೆಂಬಲ ನೀಡುತ್ತೇವೆ ಎಂದರು.  

ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ, ಮೋದಿ ಸರಿಯಾದ ಸಮಯಕ್ಕೆ ಸೂಕ್ತ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮೋದಿ ನೇತೃತ್ವದಲ್ಲಿ 3ನೇ ಬಾರಿ ಸರ್ಕಾರ ರಚಿಸುತ್ತಿರುವುದು ಐತಿಹಾಸಿಕ ದಿನ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ನಿತೀಶ್​ ಕುಮಾರ್  ಮಾತನಾಡಿ, ನರೇಂದ್ರ ಮೋದಿ ದೇಶದ ಸೇವೆ ಮಾಡಿದ್ದಾರೆ, ಮುಂದಿನ ಅವಧಿಯಲ್ಲಿ ಏನು ಬಾಕಿ ಉಳಿದಿದೆ ಅದನ್ನ ಮಾಡಲಿದ್ದಾರೆ. ಅಲ್ಲಿ ಇಲ್ಲಿ ವಿರೋಧ ಪಕ್ಷದವರು ಗೆದ್ದಿದ್ದಾರೆ ಮುಂದಿನ ಬಾರಿ ಎಲ್ಲರೂ ಸೋಲಲಿದ್ದಾರೆ. ಮೋದಿ ಅವರಿಗೆ ಈಗ ಮತ್ತೊಂದು ಅವಕಾಶ ಸಿಕ್ಕಿದೆ ಅವರಿಗೆ ನಮ್ಮ ಬೆಂಬಲವಿದೆ ಎಂದು ಹೇಳಿದರು.

Key words: Chandrababu Naidu,  Nitish Kumar, Narendra Modi

Tags :

.