ಬಿಜೆಪಿ ಅವಧಿಯಲ್ಲಿ ಚಾಣುಕ್ಯ ವಿವಿಗೆ ಜಮೀನು: 137 ಕೋಟಿ ರೂ.ನಷ್ಟ-ಸಚಿವ ಎಂ.ಬಿ ಪಾಟೀಲ್ ಆರೋಪ
ಬೆಂಗಳೂರು,ಆಗಸ್ಟ್,29,2024 (www.justkannada.in): ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್ಗೆ ಅಕ್ರಮವಾಗಿ ಸಿಎ ಸೈಟ್ಗಳನ್ನು ನೀಡಲಾಗಿದೆ ಎಂದು ಆರೋಪಿಸಿರುವ ಬಿಜೆಪಿಗೆ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದು, ಬಿಜೆಪಿ ಅವಧಿಯಲ್ಲಿ ಭೂಮಿ ಹಂಚಿಕೆ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ಬಿಜೆಪಿ ಸರಕಾರದಲ್ಲಂತೂ ತರಾತುರಿಯಲ್ಲಿ, ದೇವನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ಚಾಣುಕ್ಯ ವಿವಿಗೆ 116 ಎಕರೆ ಜಮೀನನ್ನು ಕೊಡಲಾಯಿತು. ಇದರ ಮಾರುಕಟ್ಟೆ ಬೆಲೆ 187 ಕೋಟಿ ರೂ. ಇತ್ತು. ಆದರೆ ಬಿಜೆಪಿ ಸರಕಾರ ಇದಕ್ಕೆ ಕೇವಲ 50 ಕೋಟಿ ರೂ. ನಿಗದಿಪಡಿಸಿತು. ಅಂದರೆ, ಸರಕಾರಕ್ಕೆ ಇದರಿಂದ 137 ಕೋಟಿ ರೂಪಾಯಿ ನಷ್ಟವಾಗಿದೆ. ಈಗ ಬಿಜೆಪಿಯವರು ಇದನ್ನು ತುಂಬಿಕೊಡಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ನಷ್ಟ ಆಗಿದ್ದನ್ನು ವಾಪಸ್ ಕೊಡಿಸುವ ಕೆಲಸ ಆದರೆ ಒಳ್ಳೆಯದು. ಇದನ್ನು ಲೆಹರ್ ಸಿಂಗ್ ಅವರೇ ಮಾಡಿಸಿಕೊಡಬೇಕು. ಇದರ ವಿರುದ್ಧ ಏಕೆ ರಾಜ್ಯಪಾಲರಿಗೆ ದೂರು ಕೊಡುವುದಿಲ್ಲ. ಇದಕ್ಕೇನು ನಿಮ್ಮ ಉತ್ತರ ಎಂದು ಸಚಿವ ಎಂ.ಬಿ ಪಾಟೀಲ್ ಪ್ರಶ್ನಿಸಿದ್ದಾರೆ.
Key words: Chanukya University, Land, loss, BJP, Minister, MB Patil