HomeBreaking NewsLatest NewsPoliticsSportsCrimeCinema

ಕರ್ನಾಟಕದಲ್ಲಿ 11 ತಿಂಗಳಲ್ಲಿ 28,657 ಬಾಲಗರ್ಭಿಣಿಯರು ಪತ್ತೆ..!

07:40 PM Apr 22, 2024 IST | mahesh

 

ಬೆಂಗಳೂರು, ಏ.22, 2024 :(www.justkannada.in news ) ಕೇಂದ್ರ ಸರಕಾರದ ಸಂತಾನೋತ್ಪತ್ತಿ ಮತ್ತು ಮಕ್ಕಳ ಅರೋಗ್ಯ (RCH ) ಪೋರ್ಟಲ್‌ ದಾಖಲಾಯಿಯಂತೆ ಕರ್ನಾಟಕದಲ್ಲಿ 2023 ಜನವರಿಯಿಂದ ನವೆಂಬರ್‌ ಅಂತ್ಯದವರೆಗೆ ರಾಜ್ಯದಲ್ಲಿ ಒಟ್ಟು 28,657 ಬಾಲಗರ್ಭಿಣಿಯರು ಪತ್ತೆಯಾಗಿದ್ದಾರೆ.

ಬಾಲ್ಯ ವಿವಾಹ, ಬಡತನ, ಸಾಂಸ್ಕೃತಿಕ ಭಿನ್ನತೆ, ವೈಯಕ್ತಿಕ ವರ್ತನೆ, ದುಶ್ಚಟ, ಲೈಂಗಿಕ ದೌರ್ಜನ್ಯವೇ ಬಾಲ ಗರ್ಭಿಣಿಯರು ಹೆಚ್ಚಾಗಲು ಕಾರಣ. ಜತೆಗೆ ರಾಜ್ಯದ ವಸತಿ ಶಾಲೆಗಳಲ್ಲೂ ಬಾಲಗರ್ಭಿಣಿಯರು ಪತ್ತೆ ಆಗಿರುವುದು ಆತಂಕದ ಸಂಗತಿ.

ಈ ಮಾಹಿತಿ ಹಿನ್ನೆಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿ, ರಾಜ್ಯದ ವಸತಿ ಶಾಲೆಗಳಲ್ಲಿ ಬಾಲಗರ್ಭಿಣಿಯರು ಪತ್ತೆಯಾಗಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.  ಜತೆಗೆ ಹೆಣ್ಣು ಮಕ್ಕಳ ರಕ್ಷಣೆಗೆ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ʼ ಕೇಂದ್ರ ಕಾರ್ಯಪಡೆ ʼ ರಚಿಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಬಾಲಗರ್ಭಿಣಿ ಸಮಸ್ಯೆ ಮರುಕಳಿಸದಂತೆ ಸಿಎಂ ಸೂಚಿಸಿದ್ದಾರೆ.

ಏನು ಸೂಚನೆ :

* ವಿದ್ಯಾರ್ಥಿನಿಯರು ಸಿಸಿಟಿವಿ ಕ್ಯಾಮೆರಾ ಕಣ್ಣಾವಲಿನಲ್ಲಿ ಇರಬೇಕು, ಪ್ರತಿ ತಿಂಗಳು ಅವರ ಆರೋಗ್ಯ ತಪಾಸಣೆ ನಡೆಸಬೇಕು.

* ದೀರ್ಘಾವಧಿ ರಜೆ ಪಡೆದ ವಿದ್ಯಾರ್ಥಿನಿ ಮತ್ತೆ ವಸತಿನಿಲಯಕ್ಕೆ ಬಂದಾಗ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಅವರ ದೈಹಿಕ ಬೆಳವಣಿಗೆಗಳ ಕುರಿತು ಜಾಗೃತಿ ಮೂಡಿಸಬೇಕು.

* ಶಾಲೆಗೆ ಗೈರು ಹಾಜರಾದ ವಿದ್ಯಾರ್ಥಿನಿಯರ ಮಾಹಿತಿ ಪರಿಶೀಲಿಸಬೇಕು. ಈ ಎಲ್ಲಾ ವಿಷಯಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕು ಎಂದು ಸೂಚಿಸಲಾಗಿದೆ.

key words : child pregnant women, detected,  in Karnataka

summary : 

A total of 28,657 child pregnant women were detected in Karnataka from January 2024 to the end of November 2024, according to data from the Central Government's Reproductive and Child Health (RCH) portal.

Tags :
child pregnant womendetectedin karnataka
Next Article