HomeBreaking NewsLatest NewsPoliticsSportsCrimeCinema

ರಾಜ್ಯದಲ್ಲಿ ಒಟ್ಟು 6 ಕಾಲರಾ ಪ್ರಕರಣಗಳು ಪತ್ತೆ- ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್

06:29 PM Apr 05, 2024 IST | prashanth

ಬೆಂಗಳೂರು, ಏಪ್ರಿಲ್,5, 2024 (www.justkannada.in):  ರಾಜ್ಯದಲ್ಲಿ ಒಟ್ಟು 6 ಕಾಲರಾ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.

ಈ ಕುರಿತು  ಇಂದು  ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್, ರಾಜ್ಯದಲ್ಲಿ ಬಿಸಿಲ ಗಾಳಿಯ ಜೊತೆಗೆ ಹೆಚ್ಚಾದ ತಾಪ ಮಾನದ ಪರಿಣಾಮವಾಗಿ ಕಾಲರಾ ರೋಗ ಹೆಚ್ಚಾಗುತ್ತಿದೆ. ರಾಜ್ಯಾದ್ಯಂತ 6 ಮಂದಿಗೆ ಕಾಲರಾ ರೋಗ ಪತ್ತೆಯಾಗಿದೆ. ಬೆಂಗಳೂರು, ರಾಮನಗರ ಸೇರಿದಂತೆ 6 ಮಂದಿಗೆ ಕಾಲರಾ ರೋಗ ಪತ್ತೆಯಾಗಿದೆ. ಬಿಸಿಲ ತಾಪ ಹೆಚ್ಚಾಗುತ್ತಿರೋದು, ಬಿಸಿಗಾಳಿಯ ಪರಿಣಾಮವೇ ಕಾಲರಾ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಇಬ್ಬರಿಗೆ ಕಾಲರಾ ದೃಢಪಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂವರಿಗೆ ಕಾಲರಾ ಸೋಂಕು ತಗುಲಿರೋದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ರಾಮನಗರದಲ್ಲಿ ಒಬ್ಬ ವ್ಯಕ್ತಿ ಸೇರಿದಂತೆ 6 ಮಂದಿಗೆ ಕಾಲರಾ  ದೃಢಪಟ್ಟಿದೆ ಎಂದರು.

ತಾಪಮಾನದಿಂದ ಸಾವು ಸಂಭವಿಸಿಲ್ಲ. ಇನ್ನೊಬ್ಬರಿಂದ ಕಾಲರಾ ಹರಡುವುದಿಲ್ಲ. ರಾಜ್ಯದಲ್ಲಿ ಕಾಲರಾ ತಡೆಗಾಗಿ ಆರೋಗ್ಯ ಇಲಾಖೆ ಕ್ರಮವಹಿಸಿದೆ. ಇಂದು ತಡರಾತ್ರಿ ರಾಜ್ಯದಲ್ಲಿ ಕಾಲರಾ ರೋಗ ತಡೆ ಸಂಬಂಧ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

Key words: cholera, 6 cases, D. Randeep

Tags :
cholera-6 cases - detected - state-D. Randeep
Next Article