HomeBreaking NewsLatest NewsPoliticsSportsCrimeCinema

ಸಾಲು ಸಾಲು ರಜೆ : ಮಾದಪ್ಪನ‌ ಸನ್ನಿಧಿಗೆ ಹರಿದು ಬಂದ ಭಕ್ತಸಾಗರ.

10:52 AM Dec 25, 2023 IST | prashanth

ಚಾಮರಾಜನಗರ,ಡಿಸೆಂಬರ್,25,2023(www.justkannada.in): ವಾರಾಂತ್ಯದ ಜೊತೆಗೆ ಕ್ರಿಸ್ಮಸ್ ರಜೆ ಇರುವ ಹಿನ್ನಲೆಯಲ್ಲಿ ಧಾರ್ಮಿಕ ಕೇಂದ್ರಗಳತ್ತ ಭಕ್ತರ ದಂಡೇ ಆಗಮಿಸುತ್ತಿದ್ದು ಈ ಮಧ್ಯೆ ಚಾಮರಾಜನಗರ ಜಿಲ್ಲೆ ಹನೂರಿನಲ್ಲಿರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೂ ಭಕ್ತಸಾಗರ ಹರಿದು ಬಂದಿದೆ.

ಸಾಲು ಸಾಲು ರಜೆ, ಫ್ರೀ ಬಸ್ ಸೌಲಭ್ಯ ಇರುವ ಕಾರಣ ಮಾದಪ್ಪನ‌ ಸನ್ನಿಧಿಗೆ ಬರುವ ಭಕ್ತರಲ್ಲಿ ಗಣನೀಯ ಏರಿಕೆಯಾಗಿದ್ದು , ಶ್ರಿ ಮಲೆ ಮಹದೇಶ್ವರ ಸನ್ನಿಧಿ ಭಕ್ತರಿಂದ ತುಂಬಿ ತುಳುಕುತ್ತಿದೆ.  ಚಿನ್ನದ ರಥ ಮೆರವಣಿಗೆ ವೇಳೆ ಸಹಸ್ರಾರು ಭಕ್ತರು ಸಮಾಗಮವಾಗಿದ್ದು ಉಘೇ ಮಾದಪ್ಪಾ ಉಘೇ ಉಘೇ ಎಂದು ಜೈಕಾರ ಹಾಕಿದ್ದಾರೆ.

ವಿಶೇಷ ದಿನಗಳ ಹೊರತುಪಡಿಸಿ ಸಾಮಾನ್ಯ ದಿನಗಳಲ್ಲೂ ಶ್ರೀ ಮಲೇ ಮಹದೇಶ್ವರ ಕ್ಷೇತ್ರಕ್ಕೆ  ಭಕ್ತಗಣ ಹೆಚ್ಚಾಗಿದೆ.  ಅಮಾವಾಸ್ಯೆ, ಹುಣ್ಣಿಮೆ, ವಾರಾಂತ್ಯಗಳಲ್ಲಿ ಹೆಚ್ಚಾಗುತ್ತಿರುವ  ಜನರು ಮಾದಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದು, ಈ ಬಾರಿ ಭಕ್ತರ ಭೇಟಿ ದಾಖಲೆ ಮಟ್ಟಕ್ಕೇರಿದೆ. ವಾರ್ಷಿಕ 50 ಲಕ್ಷ ಭಕ್ತರು ಮಾದಪ್ಪನ ಸನ್ನಿಧಿಗೆ ಭೇಟಿ ನೀಡುವ ಮೂಲಕ ದಾಖಲೆ ಸೃಷ್ಟಿಯಾಗಿದೆ.

Key words: Christmas- leave-devotees –male mahadeshwara hills

Tags :
Christmasdevoteesleavemale mahadeshwara hills
Next Article