For the best experience, open
https://m.justkannada.in
on your mobile browser.

ಸ್ವಚ್ಛ ನಗರಿ : 23ನೇ ಸ್ಥಾನಕ್ಕೆ ಕುಸಿದ ಮೈಸೂರು.

10:57 AM Jan 12, 2024 IST | prashanth
ಸ್ವಚ್ಛ ನಗರಿ   23ನೇ ಸ್ಥಾನಕ್ಕೆ ಕುಸಿದ ಮೈಸೂರು

ಮೈಸೂರು,ಜನವರಿ,12,2024(www.justkannada.in): ಕೇಂದ್ರ ಸರ್ಕಾರದ ಪ್ರಸಕ್ತ ವರ್ಷದ (2023) ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ವರದಿ ಹೊರಬಿದ್ದಿದ್ದು, ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಈ ಬಾರಿಯೂ ಮಧ್ಯಪ್ರದೇಶದ ಇಂದೋರ್​ ಮತ್ತು ಸೂರತ್​ ಪಾಲಾಗಿದೆ.

ಈ ಮೂಲಕ ಇಂದೋರ್ ಸತತ 7ನೇ ಬಾರಿಗೆ ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಮಧ್ಯೆ ಸಾಂಸ್ಕೃತಿಕ ನಗರಿ ಮೈಸೂರು ದೇಶದ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ 23 ನೇ ಸ್ಥಾನಕ್ಕೆ ಕುಸಿದಿದೆ.

ಕೇಂದ್ರ ಸರ್ಕಾರದ 2023ನೇ ಸಾಲಿನ ಸ್ವಚ್ಛತಾ ಸರ್ವೇಕ್ಷಣೆಯ ಫಲಿತಾಂಶ ಪ್ರಕಟವಾಗಿದ್ದು, ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಇಂದೋರ್ ನಗರ ಸತತ ಏಳನೇ ಬಾರಿ ಆಯ್ಕೆಯಾಗಿದೆ.

2 ಬಾರಿ ಸ್ವಚ್ಛ ನಗರ ಪ್ರಶಸ್ತಿಗೆ ಪಾತ್ರವಾಗಿದ್ದ ಮೈಸೂರು ಮೊದಲ 10 ಸ್ಥಾನಗಳಲ್ಲೂ ಸ್ಥಾನ ಪಡೆದಿಲ್ಲ. 2015, 2016 ರಲ್ಲಿ ಮೈಸೂರು ಸ್ವಚ್ಛನಗರಿ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿತ್ತು. 2020  ಮತ್ತು 2022 ರಲ್ಲಿ ಟಾಪ್ 10 ರಲ್ಲಿ ಸ್ಥಾನ ಪಡೆದಿತ್ತು.

ಪ್ರಸಕ್ತ ವರ್ಷದಲ್ಲಿ ಮೈಸೂರು 23ನೇ ಸ್ಥಾನಕ್ಕೆ ಕುಸಿದಿದ್ದು, ಇಂದೋರ್, ಸೂರತ್, ನವಿ ಮುಂಬೈ, ವಿಶಾಖಪಟ್ಟಣಂ ಭೋಪಾಲ್, ಕ್ರಮವಾಗಿ ಟಾಪ್ 5 ರ ಸ್ಥಾನದಲ್ಲಿವೆ. ಮೈಸೂರು ಟಾಪ್ 10 ರಲ್ಲೂ ಸ್ಥಾನ ಪಡೆಯದಿರುವುದು ಆಘಾತಕಾರಿ ವಿಚಾರವಾಗಿದೆ.

Key words: Clean city- Mysore -fell - 27th -position.

Tags :

.