HomeBreaking NewsLatest NewsPoliticsSportsCrimeCinema

ಹೈಕೋರ್ಟ್ ನಲ್ಲಿ ಸಿಎಂ ಅರ್ಜಿ ವಿಚಾರಣೆ: ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡನೆ

04:07 PM Sep 09, 2024 IST | prashanth

ಬೆಂಗಳೂರು,ಸೆಪ್ಟಂಬರ್,9,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ಹೈಕೋರ್ಟ್ ನಲ್ಲಿ ಮುಂದುವರೆದಿದೆ.

ಹೈಕೋರ್ಟ್ ನ ನ್ಯಾ. ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡನೆ ಮಾಡುತ್ತಿದ್ದಾರೆ. ದೂರು ನೀಡಿದ ಮೇಲೆ  ನಿರ್ಧಿಷ್ಟ ಸಮಯ ನೀಡಿಲ್ಲ.   17ಎ ಅಡಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ತನಿಖೆಯ ವಿವರವನ್ನ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದರು.

ರಾಜ್ಯಪಾಲರು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು. ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡುವ ಬದಲು ವರದಿ ಪಡೆಯಬೇಕಿತ್ತು. ವರದಿಯ ಬಲವಿಲ್ಲದೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ 17ಎರ ಮಾರ್ಗಸೂಚಿ ಆಧರಿಸಿ ಎಜಿ ಶಶಿಕುಮಾರ್ ಶೆಟ್ಟಿ ವಾದ ಮಂಡನೆ ಮಾಡಿದರು.

ಸಿಎಂ ತಪ್ಪು ಮಾಡಿದ್ದಾರೆ ಎಂಬುದಕ್ಕೆ ದಾಖಲೆ ಇಲ್ಲ. ತರಾತುರಿಯಲ್ಲಿ ಗವರ್ನರ್ ಬಳಿ ತನೊಖೆಗೆ  ಅನುಮತಿ ನೀಡಲಾಗಿದೆ ಎಂದರು. ಈ ವೇಳೆ ಖಾಸಗಿ ದೂರುದಾರರಿಗೆ ಇದು ಅನ್ವಯವಾಗಲ್ಲ ಎಂದು ಜಡ್ಜ್  ಪ್ರಶ್ನಿಸಿದ್ದು,  ದೂರು ನೀಡಿದ ನಂತರ 15  ದಿನಗಳಿಂದ 6 ವಾರಗಳ ಕಾಲ ಸಮಯ ಇರುತ್ತೆ.  ಸಿಎಂ ಪ್ರಕರಣದಲ್ಲಿ ಕಾಲಾವಕಾಶ ನೀಡದೇ ದೂರು ನೀಡಲಾಗಿದೆ ಎಂದು ಶಶಿಕಿರಣ್ ಶೆಟ್ಟಿ ವಾದಿಸಿದರು.

Key words: CM, petition, hearing, High Court

Tags :
CMhearingHigh Courtpetition
Next Article