12 ಆರೋಪಿಗಳ ಬಂಧನ, 14.33 ಕೋಟಿ ನಗದು ವಶ: ವಾಲ್ಮೀಕಿ ನಿಗಮ ಹಗರಣ ಕುರಿತು ಸವಿವರ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು,ಜುಲೈ,19,2024 (www.justkannada.in): ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಅಕ್ರಮ ಹಗರಣ ಕುರಿತು ಎಸ್ ಐಟಿ ತನಿಖೆ ನಡೆಸುತ್ತಿದ್ದು ಈವರೆಗೆ 12 ಆರೋಪಿಗಳನ್ನ ಬಂಧಿಸಲಾಗಿದ್ದು, 4.33 ಕೋಟಿ ರೂ. ನಗದನ್ನ ವಶಕ್ಕೆ ಪಡೆಯಲಾಗಿದೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ವಾಲ್ಮೀಕಿ ಅಭಿವೃದ್ದಿ ನಿಗಮ ಅಕ್ರಮ ಹಗರಣ ಕುರಿತು ಸದನದಲ್ಲಿ 3 ದಿನಗಳ ಕಾಲ ಚರ್ಚೆ ಮಾಡಲಾಗಿದೆ . ನಿಗಮದಲ್ಲಿ ಅಕ್ರಮ ಆಗಿಲ್ಲ ಅಂತಾ ಹೇಳಲ್ಲ. ಅಧಿಕಾರಿಗಳ ಮಟ್ಟದಲ್ಲಿ ಹಣ ವರ್ಗಾವಣೆಯಾಗಿದೆ. ಹಣ ವರ್ಗಾವಣೆ ಎಂಡಿ ಜವಾಬ್ದಾರಿ. 187.33 ಕೋಟಿ ಹಣ ನಿಗಮದಲ್ಲಿತ್ತು. 89.63 ಕೋಟಿ ವಿವಿಧ ಖಾತೆಗಳಗೆ ಹೋಗಿದೆ. ನಿಗಮದ ಅಧ್ಯಕ್ಷರಾಗಿ ದದ್ದಲ್ ನೇಮಕ ಮಾಡಿದ್ದೇವೆ. ನಿಗಮದ ಹಣವನ್ನ ವಸಂತನಗರದ ಯೂನಿಯನ್ ಬ್ಯಾಂಕ್ ನಲ್ಲಿ ಇಡುತ್ತಿದ್ದರು. ಹಣ ಇಡುವುದು ನಿಗಮದ ಎಂಡಿ ಜವಾಬ್ದಾರಿ. ಯೂನಿಯನ್ ಬ್ಯಾಂಕ್ ಗೆ ಶೋಭಾನಾ ಅಂತ ಎಂಡಿ ಇದ್ದಾರೆ. ಯೂನಿಯನ್ ಬ್ಯಾಂಕ್ ಕೇಂದ್ರದ ಅಧೀನದಲ್ಲಿದೆ. ವಸಂತನಗರ ಬ್ಯಾಂಕ್ ನಿಂದ ಎಂ.ಜಿ ರಸ್ತೆ ಬ್ಯಾಂಕ್ ಶಾಖೆಗೆ ಹಣ ವರ್ಗಾವಣೆಯಾಗಿದೆ ಎಂದರು.
ಚಂದ್ರಶೇಖರನ್ ಡೆತ್ ನೋಟ್ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ನಿಗಮದಲ್ಲಿ ಚಂದ್ರ ಶೇಖರನ್ ಅಂತಾ ಇರ್ತಾರೆ. ತಮಿಳುನಾಡು ಮೂಲದವರಾದ ಚಂದ್ರಶೇಖರನ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗುತ್ತಾರೆ. ನಿಗಮದ ಎಂಡಿ ಪದ್ಮನಾಭ ಹೆಸರನ್ನ ಉಲ್ಲೇಖ ಮಾಡಿದ್ದಾರೆ. ಅಕೌಂಟ್ ಆಫಿಸರ್ ಪರಶುರಾಮ್ ಅಂತಾ ಬರೆದಿರುತ್ತಾರೆ. ಡೆತ್ ನೋಟ್ ನಲ್ಲಿ ಹೆಸರು ಉಲ್ಲೇಖ ಮಾಡಿದ್ದಾರೆ. ಚಂದ್ರಶೇಖರನ್ ಪತ್ನಿ ಕವಿತಾ ದೂರು ನೀಡುತ್ತಾರೆ. ದೂರು ನಂತರ ಎಫ್ ಐಆರ್ ಆಗುತ್ತದೆ. ಪೊಲೀಸರು ಮಾಹಿತಿ ನೀಡುತ್ತಾರೆ. ಆಗ ಗೃಹಸಚಿವರ ಸೇರಿ ನಾಲ್ವರು ಐಪಿಎಸ್ ಅಧಿಕಾರಿಗಳ ತಂಡ ಎಸ್ಐಟಿ ರಚನೆ ಮಾಡುತೇವೆ. ಹಗರಣದ ಬಗ್ಗೆ ಎಸ್ ಐಟಿ ತನಿಖೆ ನಡೆಸುತ್ತಿದೆ. ನಿಗಮದ ಹಣ ತೆಲಂಗಾಣ, ಹೈದರಾಬಾದ್ ಗೆ ಹೋಗಿದೆ ಎಂದರು.
ಎಸ್ ಐಟಿಯಿಂದ ಈವರೆಗೆ 85 ಕೋಟಿ ಮೌಲ್ಯದಷ್ಟು ಜಪ್ತಿ ಮಾಡಲಾಗಿದೆ. ಈವರೆಗೆ 12 ಆರೋಪಗಳ ಎಸ್ ಐಟಿ ಬಂಧಿಸಿದೆ ಇದರಲ್ಲಿ 9 ಆರೋಪಿಗಳನ್ನ ಜೈಲಿಗೆ ಕಳುಹಿಸಿದ್ದಾರೆ. ಮೂವರು ಪೊಲೀಸರ ಕಸ್ಟಡಿಯಲ್ಲಿದ್ದಾರೆ. 14.33 ಕೋಟಿ ನಗದನ್ನ ವಶಕ್ಕೆ ಪಡೆಯಲಾಗಿದೆ. ನಾಗೇಶ್ವರ್ ರಾವ್ ಎಂಬುವವರ ಮನೆಯಲ್ಲಿ 1.49 ಕೋಟಿ ರೂ ವಶಕ್ಕೆ ಪಡೆದಿದ್ದಾರೆ. ಹಗರಣದ 13.50 ಲಕ್ಷಕ್ಕ ಚಿನ್ನಾಭರಣ ಖರೀದಿಸಿದ್ರು. ಸತ್ಯ ನಾರಾಯಣ ವರ್ಮಾನಿಂದ 1.20 ಕೋಟಿಗೆ ಬೆಂಜ್ ಕಾರು ಖರೀದಿಸಿದ್ದ. ಎಸ್ ಐಟಿ ಅಧಿಕಾರಿಗಳು ಇನ್ನೂ ತನಿಖೆ ಮಾಡುತ್ತಿದ್ದು, ಅಕ್ರಮ ಮಾಡಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Key words: CM Siddaramaiah, details, Valmiki Corporation, scam