ರಾಜ್ಯದಲ್ಲಿ ಗಲಭೆಗಳಾದರೇ ಸಿಎಂ ಸಿದ್ದರಾಮಯ್ಯ ನೇರ ಕಾರಣ- ಕೋಟ ಶ್ರೀನಿವಾಸ ಪೂಜಾರಿ.
05:33 PM Jan 03, 2024 IST
|
prashanth
ಉಡುಪಿ,ಜನವರಿ,3,2024(www.justkannada.in): ರಾಜ್ಯದಲ್ಲಿ ಗೋಧ್ರಾ ಹತ್ಯಾಕಾಂಡದ ರೀತಿ ಆಗದಂತೆ ನೋಡಿಕೊಳ್ಳಿ ಎಂಬ ಎಂಎಲ್ ಸಿ ಹರಿಪ್ರಸಾದ್ ಹೇಳಿಕೆ ಕುರಿತು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದಲ್ಲಿ ಗಲಭೆಗಳು ನಡೆದರೆ ಸಿಎಂ ಸಿದ್ದರಾಮಯ್ಯನೇ ನೇರ ಕಾರಣ. ದೇಶದಲ್ಲಿ ಗಲಭೆಯಾದರೇ ಕಾಂಗ್ರೆಸ್ ಪಕ್ಷವೇ ಕಾರಣವಾಗುತ್ತೆ. ಕಾಂಗ್ರೆಸ್ ಪಕ್ಷ ಬಹುದೊಡ್ಡ ಪಿತೂರಿ ಮಾಡಲು ಹೊರಟಿದೆ.
ರಾಮನ ಭಕ್ತರಲ್ಲಿ ಭಯ ಹೆಚ್ಚಿಸುವ ಹೇಳಿಕೆ ಇದು. ಕೂಡಲೇ ಬಿ.ಕೆ ಹರಿಪ್ರಸಾದ್ ರನ್ನ ವಿಚಾರಣೆ ಮಾಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದರು.
Key words: CM Siddaramaiah – directly- responsible - riots - state - Kota Shrinivasa Pujari
Next Article