HomeBreaking NewsLatest NewsPoliticsSportsCrimeCinema

ನಾಳೆಯಿಂದ ಮೂರು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ.

06:28 PM May 09, 2024 IST | prashanth

ಮೈಸೂರು,ಮೇ,9,2024 (www.justkannada.in): ನಾಳೆಯಿಂದ ಮೂರು ದಿನಗಳ ಕಾಲ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಳೆ ಬೆಳಿಗ್ಗೆ 10.30ಕ್ಕೆ ಹೆಲಿಕಾಪ್ಟರ್ ಮೂಲಕ ತಮಿಳುನಾಡಿನ ತೀಟುಕಲ್ ಹೆಲಿಪ್ಯಾಡ್ ನಿಂದ ಹೊರಟು ಬೆಳಿಗ್ಗೆ 11 ಗಂಟೆಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುವರು, ಬಳಿಕ ಅಲ್ಲಿಂದ ರಸ್ತೆಯ ಮೂಲಕ ಪಾಠಶಾಲೆ ಮುಂಭಾಗ ಗನ್ ಹೌಸ್ ಸರ್ಕಲ್ ಗೆ ಆಗಮಿಸಿ ವಿಶ್ವ ಬಸವ ಜಯಂತ್ಯೋತ್ಸವ ಅಂಗವಾಗಿ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡುವರು.

ಮೈಸೂರಿನಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ ಸಿದ್ದಾರಮಯ್ಯ 11-5-2024 ಶನಿವಾರದಂದು ಬೆಳಿಗ್ಗೆ 10.30ಕ್ಕೆ ಬಿಆರ್ ಅಂಬೇಡ್ಕರ್ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಟ್ರಸ್ಟ್ ಆವರಣ ಮಾನಂದವಾಡಿ ರಸ್ತೆ ಇಲ್ಲಿ ನಡೆಯುವ ಮಾಜಿ ಕೇಂದ್ರ ಸಚಿವ ದಿ.ವಿ.ಶ್ರೀನಿವಾಸ್ ಪ್ರಸಾದ್:  ಶ್ರದ್ಧಾಂಜಲಿ ಸ್ವಾಭಿಮಾನಿಗೆ ಸಾವಿರದ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Key words: CM Siddaramaiah - Mysore -three day-tour

Tags :
CM Siddaramaiah - Mysore -three day-tour
Next Article