For the best experience, open
https://m.justkannada.in
on your mobile browser.

“ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ”… ಬಜೆಟ್ ಭಾಷಣದಲ್ಲಿ ಬಂಗಾರದ ಮನುಷ್ಯನನ್ನು ನೆನೆದ ಸಿಎಂ

12:52 PM Feb 16, 2024 IST | prashanth
“ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ”… ಬಜೆಟ್ ಭಾಷಣದಲ್ಲಿ ಬಂಗಾರದ ಮನುಷ್ಯನನ್ನು ನೆನೆದ ಸಿಎಂ

ಬೆಂಗಳೂರು, ಫೆಬ್ರವರಿ 16, 2024 (www.justkannada.in): ಇಂದು ರಾಜ್ಯ ಸರಕಾರದ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣವನ್ನು ಡಾ.ರಾಜ್ ಕುಮಾರ್ ನಟನೆಯ ಬಂಗಾರದ ಮನುಷ್ಯ ಚಿತ್ರದ ಹಾಡಿನ ಮೂಲಕ ಆರಂಭಿಸಿದರು.

‘’ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ’’  ಎಂಬ ಹಾಡಿನ ಸಾಲುಗಳ ಮೂಲಕ ಸರಕಾರದ ಆಶಯವನ್ನು ಸಾರಿದರು.

ಹೌದು. ವರನಟ ರಾಜ್‌ ಕುಮಾರ್ ಅಭಿನಯ ಹಾಗೂ ಆರ್.ಎನ್.ಜಯಗೋಪಾಲ್ ರಚಿಸಿದ ಬಂಗಾರದ ಮನುಷ್ಯ ಚಿತ್ರದ ಈ ಹಾಡಿನಂತೆ ದೇಶದ ಯಾವುದೇ ಸರ್ಕಾರ ಜಾರಿಗೊಳಿಸದ ಅತ್ಯಂತ ಬೃಹತ್ ಪ್ರಮಾಣದ ನೇರ ನೆರವು ನೀಡುವ ಗ್ಯಾರಂಟಿ ಯೋಜನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಶ್ರೇಯ ನಮ್ಮದಾಗಿದೆ. ನಮ್ಮ ಮಹತ್ವಾಕಾಂಕ್ಷೆಯ ಗ್ಯಾರಂಟಿಗಳು ಜನರ ಆಶೋತ್ತರಗಳನ್ನು ಆಧರಿಸಿವೆ ಎಂದು ಸಿಎಂ ಬಜೆಟ್ ಭಾಷಣದಲ್ಲಿ ಹೇಳಿದರು.

Key words: CM Siddaramaiah- remembered –Bangarada manushya- budget speech

Tags :

.