HomeBreaking NewsLatest NewsPoliticsSportsCrimeCinema

ಪಾದಯಾತ್ರೆ ಮುಗಿಯವ ವೇಳೆಗೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು- ಬಿಎಸ್ ವೈ ಆಗ್ರಹ

12:45 PM Aug 03, 2024 IST | prashanth
featuredImage featuredImage

ಬೆಂಗಳೂರು,ಆಗಸ್ಟ್,3,2024 (www.justkannada.in): ಮುಡಾ ಹಗರಣ ಸಂಬಂಧ ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆಗ್ರಹಿಸಿದರು.

ಮುಡಾ ಹಗರಣ ಖಂಡಿಸಿ ಇಂದು ಬೆಂಗಳೂರಿನ ಕೆಂಗೇರಿಯಲ್ಲಿ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ನೀಡಿದ ಬಳಿಕ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮುಡಾ ಹಗರಣ ವಿರುದ್ದ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿ ಜೆಡಿಎಸ್ ಮೈಸೂರು ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿಎಂ ರಾಜೀನಾಮೆ ಕೊಡಬೇಕು. ಸಿಎಂ ಸಿದ್ದರಾಮಯ್ಯ ಮಾಡಿದ ಭ್ರಷ್ಟಾಚಾರ ಬಯಲಾಗಿದೆ. ಬಹುಶಃ ಸಿದ್ದರಾಮಯ್ಯ ಪಾದಯಾತ್ರೆ ಅರ್ಧದಲ್ಲಿ ಇರುವಾಗಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ನಿಶ್ಚಿತ ಎಂದರು.

ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಸ್ನೇಹಿತರುಗಳು ಪಾದಯಾತ್ರೆಗೆ ಆಗಮಿಸಿದ್ದಾರೆ. ಇದರಿಂಧ ನಮಗೆ ದೊಡ್ಡ ಶಕ್ತಿ ತಂದಂತಾಗಿದೆ. ಬಿಜೆಪಿ ಜೆಡಿಎಸ್ ನೇತೃತ್ವದಲ್ಲಿ ಈ ಪಾದಯಾತ್ರೆ ಯಶಸ್ವಿಯಾಗುವುದರ ನಿಶ್ಚಿತ.  ಪಾದಯಾತ್ರೆ ಮುಗಿಯುವುದರಳಗಾಗಿ ಗೌರವಯುತವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಎಸ್ ಯಡಿಯೂರಪ್ಪ ಒತ್ತಾಯಿಸಿದರು.

Key words: CM Siddaramaiah, resign, padayatra, BSY

Tags :
BSYCM Siddaramaiahpadayatraresign