For the best experience, open
https://m.justkannada.in
on your mobile browser.

ಪ್ರತಿಭಟನೆಯಲ್ಲಿ ಕೇಂದ್ರ ಸಚಿವರು, ಸಂಸದರು, ಬಿಜೆಪಿ ನಾಯಕರೂ ಕೂಡ ಭಾಗವಹಿಸಿ –ಸಿಎಂ ಸಿದ್ದರಾಮಯ್ಯ ಕರೆ.

12:35 PM Feb 05, 2024 IST | prashanth
ಪ್ರತಿಭಟನೆಯಲ್ಲಿ ಕೇಂದ್ರ ಸಚಿವರು  ಸಂಸದರು  ಬಿಜೆಪಿ ನಾಯಕರೂ ಕೂಡ ಭಾಗವಹಿಸಿ –ಸಿಎಂ ಸಿದ್ದರಾಮಯ್ಯ ಕರೆ

ಬೆಂಗಳೂರು,ಫೆಬ್ರವರಿ,5,2024(www.justkannada.in):  ರಾಜ್ಯಕ್ಕೆ ಅನುದಾನದ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿ ಫೆಬ್ರವರಿ 7 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ಕೇಂದ್ರ ಸಚಿವರು, ಸಂಸದರು, ಬಿಜೆಪಿ ನಾಯಕರೂ ಕೂಡ ಭಾಗವಹಿಸಿ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ದ ಆರೋಪಗಳ ಸುರಿಮಳೆಗೈದರು. ಫೆಬ್ರವರಿ 7ರ ಪ್ರತಿಭಟನೆ ಯಾವುದೇ ರಾಜಕೀಯಕ್ಕೆ ಸೀಮಿತವಾದ ಪ್ರತಿಭಟನೆ ಅಲ್ಲ. ಕರ್ನಾಟಕಕ್ಕೆ ಆಗಿರುವ ಅನುದಾನ ಹಂಚಿಕೆ ಅನ್ಯಾಯದ ವಿರುದ್ದದ ಪ್ರತಿಭಟನೆ. ಬಿಜೆಪಿಯವರಿಗೆ ಮಾತನಾಡೋಕೆ ಬಾಯಿಯೇ ಇಲ್ಲ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪಗೆ ಬಾಯಿ ಇಲ್ಲ ಆರ್.ಅಶೋಕ್ ಗೆ  ಈ ಬಗ್ಗೆ ಗೊತ್ತೇ ಇಲ್ಲ.  ಪ್ರಹ್ಲಾದ್ ಜೋಶಿ,  ಶೋಭಾ ಕರಂಧ್ಲಾಜೆ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ.  ಆದರೆ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿಲ್ಲ ಒಂದ ದಿನ ಪಾರ್ಲಿಮೆಮಟ್ ನಲ್ಲಿ ಮಾತನಾಡಿದ್ದಾರಾ ಎಂದು ಲೇವಡಿ ಮಾಡಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ನಮ್ಮ ರಾಜ್ಯದವರೇ. ಹೀಗಾಗಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಮೊದಲು ಸರಿಪಡಿಸಿ. ಬಿಜೆಪಿ ನಾಯಕರೂ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಲಿ. ಕೇಂದ್ರದ ಸಚಿವರು ಸಂಸದರು ಭಾಗವಹಿಸಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ನೀವೂ ಧ್ವನಿ ಎತ್ತಿ ಎಂದು ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದರು.

Key words: CM Siddaramaiah - Union Ministers- MPs - BJP leaders - participate - protest.

Tags :

.