ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಪತನ: ಇದಕ್ಕೆ ನಾನೇ ಗ್ಯಾರಂಟಿ – ಮಾಜಿ ಸಿಎಂ ಬೊಮ್ಮಾಯಿ.
04:33 PM Feb 01, 2024 IST
|
prashanth
ಹಾವೇರಿ,ಫೆಬ್ರವರಿ,1,2024(www.justkannada.in): ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ. ನಾನು ಗ್ಯಾರಂಟಿ ಕೊಡುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಆ ಬಳಿಕ ಮತ್ತೆ ಬಿಜೆಪಿ ಸರ್ಕಾರವೇ ಬರಲಿದೆ. ಇದಕ್ಕೆ ನಾನು ಗ್ಯಾರಂಟಿ ಎಂದರು.
ಸಿದ್ಧರಾಮಯ್ಯ ಅವರು ರೈತರನ್ನು ಕಡೆಗಣನೆ ಮಾಡ್ತಿದ್ದಾರೆ. ರಾಜ್ಯದ ರೈತರ ಪಾಲಿಗೆ ಈ ಸರ್ಕಾರ ಸತ್ತು ಹೋಗಿದೆ. ಗ್ಯಾರಂಟಿ ಯೋಜನೆಯ ಜಾರಿಯ ನಂತರ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನ ಬೇಸತ್ತು ಹೋಗಿದ್ದಾರೆ ಎಂದು ಮಾಜಿ ಸಿಎಂ ಬೊಮ್ಮಾಯಿ ಕಿಡಿಕಾರಿದರು.
Key words: Collapse - Congress government- after -Lok Sabha –elections-former CM -Bommai.
Next Article