For the best experience, open
https://m.justkannada.in
on your mobile browser.

ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ನೋಡ ನೋಡುತ್ತಿದ್ದಂತೆ ನೆಲಕ್ಕುರುಳಿದ ಹೈಟೆನ್ಷನ್ ವಿದ್ಯುತ್ ಕಂಬ.

04:12 PM Jan 12, 2024 IST | prashanth
ಬೆಂಗಳೂರು ಮೈಸೂರು ಹೆದ್ದಾರಿ ಬಳಿ ನೋಡ ನೋಡುತ್ತಿದ್ದಂತೆ ನೆಲಕ್ಕುರುಳಿದ ಹೈಟೆನ್ಷನ್ ವಿದ್ಯುತ್ ಕಂಬ

ಮಂಡ್ಯ,ಜನವರಿ,12,2024(www.justkannada.in): ನೋಡನೋಡುತ್ತಿದ್ದಂತೆ ಹೈಟೆನ್ಷನ್ ವಿದ್ಯುತ್ ಕಂಬ ನೆಲಕ್ಕುರುಳಿದ ಘಟನೆ ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿಈ ಘಟನೆ ನಡೆದಿದೆ. ಹೈ ಟೆನ್ಷನ್ ವಿದ್ಯುತ್ ಕಂಬದಲ್ಲಿ ಕ್ಲಾಂಪ್ ಕಳ್ಳತನದಿಂದಾಗಿ ವಿದ್ಯುತ್ ಕಂಬ ರಸ್ತೆ ಉರುಳಿಬಿದ್ದಿದೆ ಎನ್ನಲಾಗಿದೆ.   ಈ ವೇಳೆ ಮಂಡ್ಯದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ನಿವಾಸಿ ಸುರೇಶ್ ಅಪಾಯದಿಂದ ಪಾರಾಗಿದ್ದಾರೆ.  ಇನ್ನು ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸರ್ವಿಸ್ ರಸ್ತೆಗೆ ಬೃಹತ್ ಕಂಬ ಬೀಳುತ್ತಿದ್ದಂತೆ ವಾಹನಗಳು ಮುಂದೆ ಚಲಿಸದೇ ರಸ್ತೆಗೆ ನಿಂತಿದ್ದು  ಕಿಲೋಮೀಟರ್ ಉದ್ದಕ್ಕೂ ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು.

Key words: collapsed-high tension –electric- pole -near - Bangalore-Mysore highway

Tags :

.