For the best experience, open
https://m.justkannada.in
on your mobile browser.

ಕಾಲೇಜು ವಿದ್ಯಾರ್ಥಿಯಿಂದಲೇ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

04:54 PM Jul 03, 2024 IST | prashanth
ಕಾಲೇಜು ವಿದ್ಯಾರ್ಥಿಯಿಂದಲೇ ಸೆಕ್ಯೂರಿಟಿ ಗಾರ್ಡ್ ಬರ್ಬರ ಹತ್ಯೆ

ಬೆಂಗಳೂರು,ಜುಲೈ,3,2024 (www.justkannada.in): ಕಾಲೇಜು ವಿದ್ಯಾರ್ಥಿಯೇ ಸೆಕ್ಯೂರಿಟಿ ಗಾರ್ಡ್ ಒಬ್ಬರನ್ನ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಮೃತಹಳ್ಳಿಯ ಸಿಂಧಿ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಜೈ ಕಿಸಾನ್ ರಾಯ್ ಕೊಲೆಯಾದ ಸೆಕ್ಯೂರಿಟಿ ಗಾರ್ಡ್, ಸಿಂಧಿ ಕಾಲೇಜು ವಿದ್ಯಾರ್ಥಿ ಭಾರ್ಗವ ಎಂಬಾತನೇ ಹತ್ಯೆಗೈದಿರುವುದು ಎಂದು ಹೇಳಲಾಗಿದೆ.

ವಿದ್ಯಾರ್ಥಿ ಭಾರ್ಗವ ಎಂಬುವವನು ಸೆಕ್ಯೂರಿಟಿ ಕಾರ್ಡ್ ಜೈ ಕಿಸಾನ್ ರಾಯ್ ರನ್ನು  ಚಾಕುವಿನಿಂದ ಇರಿದು ಈ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ವಿದ್ಯಾರ್ಥಿ ಭಾರ್ಗವ ಮದ್ಯ ಸೇವಿಸಿ ಕಾಲೇಜಿಗೆ ಬಂದಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಕಾಲೇಜಿಗೆ ಬಿಡದಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಅಮೃತ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Key words: college student, killed, security guard

Tags :

.