HomeBreaking NewsLatest NewsPoliticsSportsCrimeCinema

ಸರ್ಕಾರದ ವಿರುದ್ದ ಕಮಿಷನ್ ಆರೋಪ: ನಿಜವೇ ಆಗಿದ್ದರೇ ಸಿಎಂ ಬಳಿ ಬಂದು ಹೇಳಲಿ- ಸಚಿವ ದಿನೇಶ್ ‍ಗುಂಡೂರಾವ್.

06:27 PM Feb 09, 2024 IST | prashanth

ಮಂಗಳೂರು,ಫೆಬ್ರವರಿ,9,2024(www.justkannada.in):  ರಾಜ್ಯ ಕಾಂಗ್ರೆಸ್  ಸರ್ಕಾರದಲ್ಲೂ 40 ಪರ್ಸೆಂಟ್ ಕಮಿಷನ್ ಮುಂದುವರೆದಿದೆ ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಆರೋಪ ನಿಜವೇ ಆಗಿದ್ದರೇ ಕೆಂಪಣ್ಣ ಸಿಎಂ ಬಳಿ ಬಂದು ಹೇಳಲಿ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ನಮ್ಮ ಸರ್ಕಾರ ಬದ್ಧತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದೆ.  ಕೆಂಪಣ್ಣ ಅವರು ವಿಷಯ ನಿಜವೇ ಆಗಿದ್ದರೆ, ನೇರವಾಗಿ ಬಂದು ಸಿಎಂ ಬಳಿ ಹೇಳಬಹುದು. ಯಾವ ವಿಚಾರ, ಎಲ್ಲಿ ಸಮಸ್ಯೆಯಾಗಿದೆ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಲಿ ಎಂದರು.

ನನ್ನ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿದ್ದರೆ, ತನಿಖೆ ಮಾಡಿಸುತ್ತೇನೆ. ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ಆಗಿದ್ದರೂ ದಾಖಲೆ ನೀಡಲಿ. ಹಿಂದಿನ ಬಿಜೆಪಿ ಸರ್ಕಾರದ ಇದ್ದಾಗ ಅವರು ಭ್ರಷ್ಟಾಚಾರದ ಬಗ್ಗೆ ಅನೇಕ ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು. ಈ ಆರೋಪದ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Key words: Commission-against –Govt-Kempanna – Minister- Dinesh Gundurao.

Tags :
againstCommissionDinesh GunduraoGovtKempannaminister
Next Article