ಜನತಾದರ್ಶನದಲ್ಲಿ ಬಿವೈ ವಿಜಯೇಂದ್ರ ಮತ್ತು ಪ್ರೀತಂಗೌಡ ವಿರುದ್ದ ಸಿಎಂ ಸಿದ್ದರಾಮಯ್ಯಗೆ ದೂರು.
ಬೆಂಗಳೂರು ,ನವೆಂಬರ್,27,2023(www.justkannada.in): ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಜನತಾದರ್ಶನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಸಿಎಂ ಸಿದ್ದರಾಮಯ್ಯಗೆ ದೂರು ಸಲ್ಲಿಕೆಯಾಗಿದೆ.
ಅನಾಥ ಮಕ್ಕಳಿಗಾಗಿ ಕೊಟ್ಟಿದ್ದ ಭೂಮಿ ಸಮಸ್ಯೆ ಕುರಿತು ಬಿವೈ ವಿಜಯೇಂದ್ರ ಹಾಗೂ ಮಾಜಿ ಶಾಸಕ ಪ್ರೀತಂಗೌಡ ವಿರುದ್ಧ ಹಾಸನದಿಂದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೂರು ನೀಡಿದ್ದಾರೆ.
ಜನತಾದರ್ಶನ ವೇಳೆ ಸಿಎಂಗೆ ಹಾಸನ ಮೂಲದ ವಿಶೇಷಚೇತನ ಮಹೇಂದ್ರ ಎಂಬುವವರು ಈ ದೂರು ನೀಡಿದ್ದಾರೆ ಎನ್ನಲಾಗಿದೆ. ಅನಾಥ ಮಕ್ಕಳಿಗಾಗಿ ಕೊಟ್ಟಿದ್ದ ಭೂಮಿ ಸಮಸ್ಯೆಯಾಗಿದೆ. ಸರ್ಕಾರಿ ನೌಕರರಾಗಿರುವ ನನ್ನ ಪತ್ನಿಗೂ ಪ್ರೀತಮ್ ಗೌಡರಿಂದ ಕಿರುಕುಳ ನೀಡಲಾಗುತ್ತಿದೆ. ಹಾಸನ ಡಿಸಿ ಸತ್ಯಭಾಮ ಹಾಗೂ ಪ್ರಿನ್ಸಿಪಾಲ್ ಸೆಕ್ರೆಟರಿ ಪ್ರಕಾಶ್ ಅವರಿಗೆ ದೂರು ನೀಡಿಲಾಗಿದೆ. ಪೊಲೀಸರಿಗೂ ದೂರು ನೀಡಲಾಗಿದ್ದು ಆದರೆ ನಮಗೆ ಯಾವುದೇ ನ್ಯಾಯ ಸಿಕ್ಕಿಲ್ಲ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ಮಹೇಂದ್ರ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿದರು.
ಈ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಅದೇ ರೀತಿ ಅಂಗನವಾಡಿ ಕೇಂದ್ರಗಳಿಗೆ ನೀಡಿದ್ದ ಆಹಾರ ಕಳಪೆಯಾಗಿದೆ ಎಂದು ತಿಳಿಸಿದಾಗ ಗುಣಮಟ್ಟದ ಆಹಾರ ಒದಗಿಸಲು ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
Key words: Complaint - CM Siddaramaiah –against- BY Vijayendra – Pritamgowda