HomeBreaking NewsLatest NewsPoliticsSportsCrimeCinema

ಕರವೇ ಅಧ್ಯಕ್ಷ ನಾರಾಯಣಗೌಡರ ಬಂಧನಕ್ಕೆ ಖಂಡನೆ: ಬಿಡುಗಡೆಗೆ ಆಗ್ರಹ.

05:35 PM Dec 28, 2023 IST | prashanth

ಬೆಂಗಳೂರು,ಡಿಸೆಂಬರ್,28,2023(www.justkannada.in):  ಕಡ್ಡಾಯ ಕನ್ನಡ ನಾಮಫಲಕ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ವೇಳೆ ಕರ್ನಾಟಕ ರಕ್ಷಣಾ ವೇದಿಕೆ  ಅಧ್ಯಕ್ಷ ನಾರಾಯಣಗೌಡರನ್ನ ಬಂಧಿಸಿರುವುದಕ್ಕೆ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಖಂಡಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ಅಧ್ಯಕ್ಷರು,  ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡರನ್ನು ಬಂಧಿಸಿರುವುದನ್ನು ವಿರೋಧಿಸಿ ಖಂಡಿಸುತ್ತೇವೆ. ಕನ್ನಡ ಬೇರೆಯಲ್ಲ, ನಾರಾಯಣಗೌಡರು ಬೇರೆಯಲ್ಲ.  ಯಾವ ತಪ್ಪಿಗಾಗಿ ಜೈಲುವಾಸ ನಾರಾಯಣಗೌಡರಿಗೆ, ಇವತ್ತು ಕರ್ನಾಟಕದಲ್ಲಿ ಕನ್ನಡಿಗರು ಒಗ್ಗಾಟ್ಟಾಗಿ ಒಕ್ಕೊರಲಿನ ಧ್ವನಿಯಂತೆ ಕೇಳಿಸುತ್ತದೆ ಎಂದರೆ ಅದರ ಹಿಂದಿನ ಶಕ್ತಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣಗೌಡರು.

ಇಂತಹ ಕನ್ನಡ ಕಟ್ಟಾಳನ್ನು ಬಂಧಿಸಿರುವುದು ಸರ್ಕಾರಕ್ಕೆ ಶೋಭೆ ತರುವಂತಹದ್ದಲ್ಲ, ದ. ರಾಮಕೃಷ್ಣ ಹೆಗ್ಗಡೆಯವರು ಮುಖ್ಯಮಂತ್ರಿಯಾಗಿದ್ದಾಗ  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದ್ದಂತಹವರು. ಕನ್ನಡಿಗರ ಕಷ್ಟ ಏನೆಂದು ಅವರಿಗೆ ತಿಳಿಯದ ವಿಷಯವೇನಲ್ಲ. ಹಾಗಾಗಿ ಯಾವುದೇ ಒತ್ತಡಕ್ಕೆ ಮಣಿಯದೇ ಈ ಕೂಡಲೇ ನಾರಾಯಣಗೌಡರನ್ನು ಬಿಡುಗಡೆ ಮಾಡಬೇಕೆಂದು ವೇದಿಕೆ ಆಗ್ರಹಿಸುತ್ತದೆ.

ಭಾರತದಲ್ಲಿ ಪ್ರಾದೇಶಿಕ ಭಾಷಾ ಹಂಚಿಕೆಯಲ್ಲಿ ಕನ್ನಡವು ಕರ್ನಾಟಕ ಭಾಷೆಯಾಗಿ ಘೋಷಣೆಯಾದ ದಿನದಿಂದ ಕನ್ನಡಕ್ಕೆ ಅನ್ಯಾಯವಾಗುತ್ತಲೇ ಇರುವ ಸನ್ನಿವೇಶದಲ್ಲಿ ಕನ್ನಡಿಗರ ಧ್ವನಿಯನ್ನು ದಮಿನಿಸುವ ಕಾರ್ಯ ನಡೆಯುತ್ತಿರುವ ಕರ್ನಾಟಕದಲ್ಲಿ ನಾರಾಯಣಗೌಡರಂತ ಕನ್ನಡ ಸೇವಕರನ್ನು ಅವರ ಧ್ವನಿಯನ್ನು ಮುಚ್ಚಿಹಾಕುವ ಕರ್ನಾಟಕ ಸರ್ಕಾರದ ಕಾರ್ಯವನ್ನು ಈಗಲೆ ನಿಲ್ಲಿಸಿ ನಾರಾಯಣಗೌಡರನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕೆಂದು ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆಯು ಈ ಮೂಲಕ ಆಗ್ರಹಿಸುತ್ತದೆ ಎಂದಿದ್ದಾರೆ.

Key words: Condemnation –arrest-kannada organization- President -Narayana Gowda

Tags :
Condemnation –arrest-kannada organization- President -Narayana Gowda
Next Article