‘ಕೈ’ ಅಭ್ಯರ್ಥಿ ಸುನೀಲ್ ಬೋಸ್ ಮತಯಾಚನೆ: ಅವಕಾಶ ಕೊಡುವಂತೆ ಮನವಿ.
12:08 PM Apr 06, 2024 IST
|
prashanth
ಚಾಮರಾಜನಗರ,ಏಪ್ರಿಲ್,6,2024 (www.justkannada.in): ಚಾಮರಾಜನಗರ ಲೋಕಸಭಾ ಚುನಾವಣೆ ಕಣ ರಂಗೇರಿದ್ದು ಇಂದು ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಟಿ. ನರಸೀಪುರ ತಾಲ್ಲೂಕಿನ ವಿವಿಧೆಡೆ ಮತಯಾಚನೆ ಮಾಡಿದರು.
ಟಿ. ನರಸೀಪುರ ತಾಲ್ಲೂಕಿನ ಟಿ. ದೊಡ್ಡಪುರ, ಹೆಮ್ಮಿಗೆ, ತಲಕಾಡು ಗ್ರಾಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮತಯಾಚನೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಉತ್ತಮ ವಾತಾವರಣವಿದೆ. 2008ರಲ್ಲಿ ರಾಜಕೀಯಕ್ಕೆ ಬಂದ ನನಗೆ ಸಾಕಷ್ಟು ಪ್ರೀತಿಯನ್ನ ಕೊಟ್ಟಿದ್ದೀರಾ. ಇಂದು ಲೋಕಸಭೆ ಟಿಕೆಟ್ ಸಿಕ್ಕಿರುವುದಕ್ಕೂ ನೀವೇ ಕಾರಣ. ನನ್ನ ರಾಜಕೀಯ ಪಯಣದಲ್ಲಿ ಯಾವಾಗಲೂ ಸಹಕಾರ ನೀಡಿದ್ದೀರಾ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿಯೂ ನನಗೆ ಹೆಚ್ಚಿನ ಬಹುಮತ ನೀಡಿ ನಿಮ್ಮ ಸೇವೆ ಮಾಡಲಿಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
Key words: congress, candidate, Sunil Bose
Next Article