ಡಾ.ಬಿ.ಆರ್ ಅಂಬೇಡ್ಕರ್ ಯೋಜನೆಯನ್ನೇ ಕಾಂಗ್ರೆಸ್ ಹೈಜಾಕ್ ಮಾಡಿದೆ- ಮಾಜಿ ಸಿಎಂ ಬೊಮ್ಮಾಯಿ ಕಿಡಿ.
ಹಾವೇರಿ,ಏಪ್ರಿಲ್,25, 2024 (www.justkannada.in): ದೇಶಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕೊಟ್ಟ ಸಾಮಾಜಿಕ ನ್ಯಾಯವನ್ನ ಕಾಂಗ್ರೆಸ್ ಹೈಜಾಕ್ ಮಾಡಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.
ಹಿರೆಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಡಾ.ಬಿ.ಆರ್ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ. ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವರು ಸಂಸತ್ತಿಗೆ ಬರದಂತೆ ನೋಡಿಕೊಂಡಿದ್ದರು. ಅವರು ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಆರು ಅಡಿ ಜಾಗವನ್ನೂ ಕಾಂಗ್ರೆಸ್ ಕೊಡಲಿಲ್ಲ. ಈಗ ಅಂಬೇಡ್ಕರ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನ ಎಲ್ಲ ವರ್ಗದ ಹಾಗೂ ಸಮಾಜದ ಜನರು ಬೆಂಬಲಿಸುತ್ತಿದ್ದಾರೆ. ಅವರು ಹಂತ ಹಂತವಾಗಿ ಬೆಳೆದಿದ್ದಾರೆ. ಲಾಲ ಬಹದ್ದೂರು ಶಾಸ್ತ್ರಿ ಅವರ ನಂತರ ಅತ್ಯಂತ ದೇಶ ಭಕ್ತ ಮೋದಿ. ಅವರ ತಾಯಿ ತೀರಿಕೊಂಡಾಗ ಮೂರು ಗಂಟೆಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಿ ಮತ್ತೆ ದೇಶ ಸೇವೆಗೆ ಬಂದರು ಎಂದು ಬಸವರಾಜ ಬೊಮ್ಮಾಯಿ ಗುಣಗಾನ ಮಾಡಿದರು.
Key words: Congress, Dr. BR Ambedkar, Basavaraj Bommai