HomeBreaking NewsLatest NewsPoliticsSportsCrimeCinema

‘ಕೈ’ ಸರ್ಕಾರದ ಒಂದು ವರ್ಷ ಕಥೆ: ಕನ್ನಡಿಗರ ದಿನನಿತ್ಯದ ವ್ಯಥೆ-  ಆರ್.ಅಶೋಕ್ ವಾಗ್ದಾಳಿ.

11:49 AM May 20, 2024 IST | prashanth

ಬೆಂಗಳೂರು,ಮೇ,20,2024 (www.justkannada.in): ಸಿಎಂ ಸಿದ್ದರಾಮಯ್ಯ ನೇತೃತ್ವದ  ಕಾಂಗ್ರೆಸ್ ಸರ್ಕಾರ ಒಂದು ವರ್ಷಪೂರೈಸಿದ್ದು ಈ ಹಿನ್ನೆಲೆಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ್, ಕುಸಿದ ಕಾನೂನು ಸುವ್ಯವಸ್ಥೆ ಮಹಿಳೆಯರು ಹೆಣ್ಣುಮಕ್ಕಳಿಗಿಲ್ಲ ಸುರಕ್ಷತೆ, ಏರುತ್ತಲೇ ಇದೆ ಸಾಲದ ಹೊರೆ, ಅಭಿವೃದ್ದಿ ಮಾತ್ರ ಕಣ್ಮರೆ ನಾಲಾಯಕ್ ಸಚಿವರುಗಳು ಸಾಲು ಸಾಲು ಎಡವಟ್ಟುಗಳು,

ಸಿಎಂ ಕುರ್ಚಿಗೇರಲು ಡಿಸಿಎಂ ಕನಸು ಕುರ್ಚಿ ಉಳಿಸಿಕೊಳ್ಳಲು ಸಿಎಂ ಸರ್ಕಸ್ಸು,  ಜಾತಿಗೊಂದು, ಜಿಲ್ಲೆಗೊಂದು ಬಣ ನಾಡಿನ ಅಭಿವೃದ್ದಿ ಮಾತ್ರ ಗೌಣ,  ಇದು ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಕಥೆ ಏಳೂವರೆ ಕೋಟಿ ಕನ್ನಡಿಗರ ದಿನನಿತ್ಯದ ವ್ಯಥೆ ಎಂದು ವಾಗ್ದಾಳಿ ನಡೆಸಿದ್ದಾರೆ.

Key words: congress, government,  R. Ashok

Tags :
congress-government-one year- R. Ashok
Next Article