ಅನುದಾನದ ವಿಚಾರವಾಗಿ ಕಾಂಗ್ರೆಸ್ ಶ್ವೇತಪತ್ರ ಹೊರಡಿಸಲಿ-ಮಾಜಿ ಸಚಿವ ವಿ.ಸುನೀಲ್ ಕುಮಾರ್.
06:24 PM Feb 02, 2024 IST
|
prashanth
ಉಡುಪಿ,ಫೆಬ್ರವರಿ,2,2024(www.justkannada.in): ಕೇಂದ್ರ ಸರ್ಕಾರದ ತಾರತಮ್ಯ ನೀತಿ ವಿರೋಧಿಸಿ ಫೆಬ್ರವರಿ 7 ರಂದು ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾಜಿ ಸಚಿವ ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ವಿ.ಸುನೀಲ್ ಕುಮಾರ್, ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಅನುದಾನ ನೀಡಲಾಗಿದೆ. ಪ್ರಧಾನಿ ಮೋದಿ ಅವರ ಅವಧಿಯಲ್ಲಿ ಎಷ್ಟು ಅನುದಾನ ನೀಡಲಾಗಿದೆ ಎಂಬುದರ ಬಗ್ಗೆ ಕಾಂಗ್ರೆಸ್ ಶ್ವೇತಪತ್ರ ಹೊರಡಿಸಲಿ ಎಂದು ಹೇಳಿದರು.
ಫೆಬ್ರವರಿ 7 ರಂದು ಕಾಂಗ್ರೆಸ್ ಪ್ರತಿಭಟನೆ ಘೋಷಣೆ ಹಾಸ್ಯಸ್ಪದ. ಡಿಕೆ ಸುರೇಶ್ ಹೇಳಿಕೆ ಮರೆ ಮಾಚುವ ಪ್ರಯತ್ನ. ಕೇಂದ್ರದ ಅನುದಾನದ ವಿಚಾರದಲ್ಲಿ ನಾವು ಚರ್ಚೆಗೆ ಸಿದ್ದ. ಕೇಂದ್ರದ ಮೇಲೆ ಸುಮ್ಮನೆ ಗೂಬೆ ಕೂರಿಸುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಮುಂದೆ ಪರೇಡ್ ಮಾಡಲು ಹೋಗುತ್ತಿದ್ದಾರೆ. ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶಿಸಲು ಹೋಗುತ್ತಿದ್ದಾರೆ ಎಂದು ಸುನೀಲ್ ಕುಮಾರ್ ಲೇವಡಿ ಮಾಡಿದರು.
Key words: Congress- issue - grants-former minister -V. Sunil Kumar.
Next Article