ಇಂದು ಮೈಸೂರಿನಲ್ಲಿ ‘ಕೈ’ ಜನಾಂದೋಲನ ಸಮಾವೇಶ: 5000 ಮಂದಿ ಪೊಲೀಸರ ನಿಯೋಜನೆ
ಮೈಸೂರು,ಆಗಸ್ಟ್,9,2024 (www.justkannada.in): ಮುಡಾ ಹಗರಣ ವಿರೋಧಿಸಿ ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಕೌಂಟರ್ ಕೊಟ್ಟಿರುವ ಕಾಂಗ್ರೆಸ್ ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಾಂದೋಲನ ಸಮಾವೇಶ ಆಯೋಜಿಸಿದೆ.
ಇಂದು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದ್ದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಸಚಿವರು ಶಾಸಕರು ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ. ಸಮಾವೇಶಕ್ಕೆ 5000 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ.
ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ,ಕೋಲಾರ, ಕೆಜಿಎಫ್, ಮೈಸೂರು, ಶಿವಮೊಗ್ಗ, ಮಂಡ್ಯ, ಹಾಸನ, ಚಾಮರಾಜನಗರ ,ಮಡಿಕೇರಿ ಸೇರಿ ಹಲವೆಡೆಯಿಂದ ಪೊಲೀಸ್ ಸಿಬ್ಬಂದಿಯನ್ನ ಕರೆಸಿಕೊಳ್ಳಲಾಗಿದೆ. ಭದ್ರತೆಗೆ 22ಮಂದಿ SP, ನಾಲ್ಕು ಮಂದಿ ಡಿಐಜಿ, ಒಬ್ಬರು ಐಜಿ, 300 ಮಂದಿ ಇನ್ಸ್ ಪೆಕ್ಟರ್, 1000 ಕ್ಕೂ ಹೆಚ್ಚು ಮಂದಿ ಸಬ್ ಇನ್ಸ್ ಪೆಕ್ಟರ್, ಸಾವಿರಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಕೆಎಸ್ ಆರ್ ಪಿ, ಡಿಎಆರ್ ಸೇರಿ ನೂರಕ್ಕೂ ಹೆಚ್ಚು ತುಕಡಿಗಳನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ.
ನಾಡಹಬ್ಬ ದಸರೆಗಿಂತಲೂ ಹೆಚ್ಚು ಭದ್ರತೆ, ಮೈಸೂರು ಇತಿಹಾಸದಲ್ಲೇ ಹೆಚ್ಚು ಪೊಲೀಸರ ನಿಯೋಜನೆ ಮಾಡಿಲಾಗಿದೆ. 700 ಕ್ಕೂ ಹೆಚ್ಚು ಪೊಲೀಸರಿಗಾಗಿ ಬಸ್ ವ್ಯವಸ್ಥೆ ಮಾಡಲಾಗಿದ್ದು. ಮೈಸೂರಿನಲ್ಲಿರುವ ಎಲ್ಲಾ ಕಲ್ಯಾಣ ಮಂಟಪಗಳು, ಛತ್ರಗಳು ಬುಕ್ ಆಗಿವೆ. 6000 ಮಂದಿಯ ತಿಂಡಿ, ಊಟದ ವ್ಯವಸ್ಥೆಗೆ ಪೊಲೀಸರಿಂದ ಹೋಟೆಲ್ ಗಳನ್ನ ಬುಕ್ಕಿಂಗ್ ಮಾಡಲಾಗಿದೆ. 400 ಕ್ಕೂ ಹೆಚ್ಚು ಬಾಡಿ ಕ್ಯಾಮೆರಾಗಳು, 400 ಕ್ಕೂ ಹೆಚ್ಚು ಸಿಸಿಟಿವಿಗಳ ಅಳವಡಿಕೆ ಮಾಡಲಾಗಿದೆ.
Key words: congress, Janandola convention, Mysore