HomeBreaking NewsLatest NewsPoliticsSportsCrimeCinema

ಕರ್ನಾಟಕದಲ್ಲಿ ಕಾಂಗ್ರೆಸ್ ನಿಂದ ಅನ್ಯಾಯ: ಒಬಿಸಿ ಮೀಸಲಾತಿ ಮುಸ್ಲೀಮರಿಗೆ ಹಂಚಿಕೆ-ಪ್ರಧಾನಿ ಮೋದಿ ವಾಗ್ದಾಳಿ.

01:39 PM Apr 25, 2024 IST | prashanth

ಮಧ್ಯಪ್ರದೇಶ,ಏಪ್ರಿಲ್,25,2024 (www.justkannada.in): ಒಬಿಸಿ ಮೀಸಲಾತಿಯನ್ನ ಮುಸ್ಲೀಮರಿಗೆ ಕಾಂಗ್ರೆಸ್ ಹಂಚಿದೆ. ಈ ಮೂಲಕ ಒಬಿಸಿ ಮತ್ತು ಎಸ್ ಸಿ ಸಮುದಾಯತಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಮಧ್ಯಪ್ರದೇಶ ಮೊರೆನಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ,  ಕಾಂಗ್ರೆಸ್ ಒಬಿಸಿ ಮೀಸಲಾತಿ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದೆ.  ಕರ್ನಾಟಕದಲ್ಲಿ ಒಬಿಸಿ ಮೀಸಲಾತಿಯನ್ನ ಮುಸ್ಲೀಮರಿಗೆ ಹಂಚಲಾಗಿದೆ. ಮುಸ್ಲೀಮರಿಗೆ ಅಕ್ರಮವಾಗಿ ಒಬಿಸಿ ಮೀಸಲಾತಿ  ನೀಡಲಾಗುತ್ತಿದೆ. ಮೀಸಲಾತಿ ಹೆಸರಲ್ಲಿ ಒಬಿಸಿ ಸಮುದಾಯಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದೆ ಎಂದು ಗುಡುಗಿದರು.

ಕಾಂಗ್ರೆಸ್ ಪಕ್ಷವು ದೇಶದಲ್ಲಿ ಪಿತ್ರಾರ್ಜಿತ ಆಸ್ತಿ ಮೇಲೆ ತೆರಿಗೆ ಹೇರಲು ಹೊರಟಿದೆ 'ಮುಸ್ಲಿಂ ಎಂಬ ಕಾರಣಕ್ಕೆ ಮಾತ್ರ ಉಚಿತ ರೇಷನ್ ಪಡೆಯುತ್ತಾರೆ ಎಂಬುದನ್ನು ನೀವು ಎಂದಾದರೂ ಕೇಳಿದ್ದೀರಾ? ದೇಶದ ಸಂಪತ್ತಿನ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ ಬಡವರಿಗೆ ಮೊದಲ ಹಕ್ಕು ಎಂದು ನಾವು ಹೇಳುತ್ತೇವೆ' ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: Congress, Karnataka, reservation, PM Modi

Tags :
Congress- Karnataka-OBC reservation -PM Modi
Next Article