HomeBreaking NewsLatest NewsPoliticsSportsCrimeCinema

ಕಾಂಗ್ರೆಸ್‌ ಅಭ್ಯರ್ಥಿ ಟೆಂಪಲ್‌ ರನ್‌ :  ನಾವು ದುಡ್ಡು ಹಂಚಲ್ಲ, ಸಿದ್ದರಾಮಯ್ಯ ಅವರ ಗ್ಯಾರಂಟಿಯೇ ನಮಗೆ ಶ್ರೀರಕ್ಷೆ..!

02:40 PM Apr 09, 2024 IST | mahesh

ಮೈಸೂರು, ಏ.09, 2024 : (www.justkannada.in news ) ಮೈಸೂರು ಕೊಡಗು ಲೋಕ ಸಭಾ ಕ್ಷೇತ್ರದ  ಕಾಂಗ್ರೆಸ್‌ ಅಭ್ಯರ್ಥಿ ಎಂ ಲಕ್ಷ್ಮಣ ಅವರು ಯುಗಾದಿ ದಿನವಾದ ಇಂದು ನಗರದ ವಿವಿಧೆಡೆ ದೇವಾಲಯಗಳಿಗೆ ಭೇಟಿ ನೀಡಿ ಬಳಿಕ ಮತಯಾಚನೆ ನಡೆಸಿದರು.

ದೇವರಾಜ ಮೊಹಲ್ಲಿನ ಜಗನ್ಮೋಹನ ಅರಮನೆ ಹತ್ತಿರದ ಶ್ರೀ ಶ್ರೀ ಬ್ರಹ್ಮ ತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠ ಭೇಟಿ ನೀಡಿದ್ದರು. ಬಳಿಕ ಮಠದ ಶ್ರೀ ಲಕ್ಷ್ಮೀ ಹಯಗ್ರೀವ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದು. ಯುಗಾದಿ ಹಬ್ಬ ಶುಭಾಶಯ ಕೋರಿ,ಬೇವು ಬೆಲ್ಲ ಸ್ವೀಕರಿಸಿದ್ದರು. ಮಠದ ಹಿರಿಯ ಸ್ವಾಮೀಜಿಗಳಾದ ಮದಭಿನವ  ವಾಗೀಶ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿಗಳ ಆಶೀರ್ವಾದರು.

ವಿಜಯನಗರ 1ನೇ ಹಂತದಲ್ಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ . ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ಭಾಷ್ಯಂ ಸ್ವಾಮೀಜಿ, ಎಂ ಲಕ್ಷ್ಮಣ ರವರಿಗೆ ಆತ್ಮೀಯ ಸ್ವಾಗತ ಕೋರಿ, ದೇವಾಲಯದಲ್ಲಿದ್ದ ಭಕ್ತಾದಿಗಳ ಬಳಿ ಎಂ ಲಕ್ಷ್ಮಣ ರವರಿಗೆ ಬೆಂಬಲಿಸುವಂತೆ ಕೇಳಿಕೊಂಡರು.

ಲಷ್ಕರ್ ಮೊಹಲ್ಲಾ,ಕೆ.ಟಿ ಸ್ಟೀಟ್ ನಲ್ಲಿರುವ  ಶ್ರೀ ರಾಮಲಿಂಗೇಶ್ವರ ಚೌಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಎಂ.ಲಕ್ಷ್ಮಣ್‌ ಭೇಟಿ ನೀಡಿ. ಶ್ರೀ ಚೌಡೇಶ್ವರಿ ಅಮ್ಮನವರ ದರ್ಶನ ಪಡೆದರು. ಚುನಾವಣೆ ಸಮೀಪಿಸುತ್ತಿದ್ದು, ಜನಗಳ ಸೇವೆಗೆ ನನಗೊಂದು ಬಾರಿ ಅವಕಾಶ ನೀಡುವಂತೆ ಪ್ರಾರ್ಥಿಸಿದರು. ದೇವಸ್ಥಾನದಲ್ಲಿ ಹಾರ ಹಾಕಿ ಎಂ ಲಕ್ಷ್ಮಣ ರವರನ್ನು ಗೌರವಿಸಿದರು. ದೇವಸ್ಥಾನ ಆವರಣದಲ್ಲಿ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದ್ದು, ಸಭೆಯಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಲಷ್ಕರ್ ಮೊಹಲ್ಲಾದ ಜನರು ಪಾಲ್ಗೊಂಡಿದ್ದರು. ಜನರು ಲಕ್ಷ್ಮಣ ರವರನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.ಬಳಿಕ‌ ಲಕ್ಷ್ಮಣ್ ರವರಿಗೆ ಶಾಲು ಹೊದಿಸಿ ಗೌರವಿಸಿ ಸ್ವಾಗತಿಸಿದರು.

ಈ ವೇಳೆಯಲ್ಲಿ ಅಭ್ಯರ್ಥಿ  ಎಂ.ಲಕ್ಷ್ಮಣ ರವರು ಮಾತನಾಡಿ, ಯುಗಾದಿ ಹಬ್ಬದ ಶುಭಾಶಯಗಳು ಕೋರಿದ್ರು,

ಕಾಂಗ್ರೆಸ್ ಪಕ್ಷ ನಿಮ್ಮ ಹಾಗೆ ಇರುವಂತಹ ಸಾಮಾನ್ಯ ರಲ್ಲಿ  ಸಾಮಾನ್ಯ ವ್ಯಕ್ತಿಯನ್ನು ಗುರುತಿಸಿದೆ. ಮೈಸೂರು ನಗರದಲ್ಲಿ 9ಲಕ್ಷ ಮತದಾರರು ಇದ್ದಾರೆ, ಕಳೆದ ಬಾರಿ ಎರಡು ಬಾರಿಯೂ  ಬಿಜೆಪಿ ಅಭ್ಯರ್ಥಿ ಗೆದ್ದಿದ್ದರು. ಈಗ ಅವರನ್ನು ಬದಲಾವಣೆ ಮಾಡಿ ರಾಜ ಮನೆತನದ ದತ್ತು ಪುತ್ರನಿಗೆ ಅವಕಾಶ ಕೊಟ್ಟಿದ್ದಾರೆ. ಆದರೆ ನಮ್ಮ ಪಕ್ಷ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಮಾಡಿಕೊಟ್ಟಿದೆ. ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿರುವುದು ಹಲವಾರು ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ. ನಾನು ಅಭ್ಯರ್ಥಿ ಅಲ್ಲ ನೀವೆಲ್ಲರೂ ಅಭ್ಯರ್ಥಿಗಳು, ಸಿಎಂ ತವರು ಜಿಲ್ಲೆ ಸಿದ್ದರಾಮಯ್ಯ ರವರದ್ದು, ಪ್ರತಿಷ್ಠಿತ ಕ್ಷೇತ್ರದಲ್ಲಿ ನಾವು ಗೆಲ್ಲಲೇ ಬೇಕು. ಹಿಂದೆ ಮನೆ ಮನೆಗೆ ಗ್ಯಾರಂಟಿ ಯೋಜನೆ ಕಾರ್ಡ್ಗೆ  ಸಹಿ ಮಾಡಿ ತಲುಪಿಸಿದ್ದೆವು. ಕೇಂದ್ರದಿಂದ ಮತ್ತೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಿಮಗೆ ಕೊಡಲು ನಮ್ಮ ಕಾಂಗ್ರೆಸ್ ಪಕ್ಷ ಮುಂದಾಗಿದೆ. ನಾವು ಮನೆಗೆ ಹೋಗಿ ದುಡ್ಡು ಹಂಚುವ ಕೆಲಸ ಮಾಡುವುದಿಲ್ಲ ಏಕೆಂದರೆ ಸಿದ್ದರಾಮಯ್ಯ ರವರ ಕೊಡುಗೆ ಅವರ ಅಭಿವೃದ್ದಿ ಕಾರ್ಯಕ್ರಮಗಳು ಮೈಸೂರಿಗೆ ಅಪಾರವಿದೆ.

ಮನೆ ಮನೆಗೆ ಬಿಜೆಪಿ ಅವರು ಹೋಗಿ ತಲೆ ಕೆಡಿಸುತ್ತಾರೆ, ಅವರು ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮುಂದಿಟ್ಟು ಕೊಂಡು ಮತಕೇಳಲು ಆಗುವುದಿಲ್ಲ ಆಗಾಗಿ ಜನರನ್ನು ಮರಳು ಮಾಡುತ್ತಾರೆ. ನಾನು ಒಂದು ವೇಳೆ ಸೋತರೆ ಸಿದ್ದರಾಮಯ್ಯ ರವರು ಸೋತ ಹಾಗೆ ,ಮುಂದೆ ಕಷ್ಟ ಕಾರ್ಪಣ್ಯ ಗಳಿಗೆ ನಾವು ಸ್ಪಂದಿಸುತ್ತೇವೆ. 10 ವರ್ಷಗಳಿಂದ ಸಂಸದರು ಏನು ಮಾಡಿದ್ದಾರೆ,ಜಾತಿ ವ್ಯವಸ್ಥೆ ಹೆಸರಲ್ಲಿ ಜನರ ಮಧ್ಯೆ ಕಲಹ ಉಂಟು ಮಾಡಿದ್ದಾರೆ, ಅವರು ಒಡೆದು ನಿಮ್ಮ ಬಳಿ ಮತ ಕೇಳುವುದನ್ನು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ನಿಮ್ಮ ವಾರ್ಡ್ನಲ್ಲಿ 80% ಮತದಾನ ಮಾಡಬೇಕು.ಬಿಜೆಪಿ ಅವರು ಯಾವ ಅಭಿವೃದ್ದಿ ಮಾಡಿದ್ದಾರೆ,ಬಡವರಿಗೆ ಜಿ.ಎಸ್.ಟಿ ಹಾಕಿದ್ದು, ಹೋಟೆಲ್ ನಲ್ಲಿ ಇಡ್ಲಿ ಮಾರುವವರ ಬಳಿಯೂ ಕೂಡ ಜಿ.ಎಸ್.ಟಿ ಹಾಕಿ ಬಡವರ ರಕ್ತ ಹಿರುವಂತಹ ಕೆಲಸ ಮಾಡಿದ್ದಾರೆ.ಸಾಮಾನ್ಯ ಜನಗಳ ಮಕ್ಕಳು ಚೆನ್ನಾಗಿ ಓದಿ ಕೆಲಸ ಸಿಗದೇ ಹೋಟೆಲ್ ನಲ್ಲಿ ಫುಡ್ ಡೆಲಿವರಿ ಕೆಲಸ ಮತ್ತು ಕಡಲೆ ಕಾಯಿ ಮಾರುವ ಕೆಲಸಕ್ಕೆ ಮುಂದಾಗಿದ್ದಾರೆ. ಭಾರತ ದೇಶದಲ್ಲಿ ಎಲ್ಲರನ್ನೂ ಒಟ್ಟಾಗಿ ಸಮಾನತೆಯಿಂದ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುವ ಪಕ್ಷವಿದ್ದರೆ  ಅದು ನಮ್ಮ ಪಕ್ಷ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ನಮ್ಮ ಪಕ್ಷದ  ಜಿಲ್ಲಾಧ್ಯಕ್ಷರು ಬಿ.ಜೆ ವಿಜಯ್ ಕುಮಾರ್ ಮತ್ತು ನಗರಾಧ್ಯಕ್ಷ  ಮೂರ್ತಿರವರು ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ ನಾನು ಅವರಿಗೆ ಅಭಾರಿಯಾಗಿರುತ್ತೇನೆ ಋಣಿಯಾಗಿರುತ್ತೇನೆ. ನೀವು ಈ ನನ್ನ ಕೈ ಹಿಡಿಯುತ್ತಿರ ಎಂದು ಸಂಪೂರ್ಣ ನಂಬಿಕೆ ನನಗೆ ಇದೆ ಎಂದು ಹೇಳಿದ್ದರು.

ಈ ವೇಳೆ  ನಗರಾಧ್ಯಕ್ಷ ಆರ್ ಮೂರ್ತಿ, ಡಿಸಿಸಿ ವಕ್ತಾರ ಮಹೇಶ್ ಹಿಂದುಳಿದ ವರ್ಗದ ಪ್ರಧಾನ ಕಾರ್ಯದರ್ಶಿ ನಾಗೇಶ್,ವೆಂಕಟೇಶ್,  ಹಾಗೂ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

key words : congress,  Lakshman,  temple run , Mysore

 

 

Tags :
congressLakshmantemple run
Next Article