For the best experience, open
https://m.justkannada.in
on your mobile browser.

ಡಿಕೆ ಸುರೇಶ್ ಸೋಲು: ಗ್ಯಾರಂಟಿ ಯೋಜನೆಗಳು ‘ಕೈ’  ಹಿಡಿದಿಲ್ಲ ಎಂದ ಶಾಸಕ ಬಾಲಕೃಷ್ಣ.

05:29 PM Jun 08, 2024 IST | prashanth
ಡಿಕೆ ಸುರೇಶ್ ಸೋಲು  ಗ್ಯಾರಂಟಿ ಯೋಜನೆಗಳು ‘ಕೈ’  ಹಿಡಿದಿಲ್ಲ ಎಂದ ಶಾಸಕ ಬಾಲಕೃಷ್ಣ

ಬೆಂಗಳೂರು,ಜೂನ್,8,2024 (www.justkannada.in): ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ  ಡಿಕೆ ಸುರೇಶ್ ಸೋಲಿನ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ, ಗ್ಯಾರಂಟಿ ಯೋಜನೆಗಳು ನಮ್ಮ ಕೈ  ಹಿಡಿದಿಲ್ಲ ಎಂದಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕ ಬಾಲಕೃಷ್ಣ,   ಡಿಕೆ ಸುರೇಶ್ ನಮ್ಮನ್ನು ಗೆಲ್ಲಿಸುವುದರಲ್ಲಿ ಸಫಲರಾಗಿದ್ದರು. ಆದರೆ, ನಾವು ಅವರನ್ನು ಗೆಲ್ಲಿಸುವುದರಲ್ಲಿ ವಿಫಲ ಆಗಿದ್ದೇವೆ. ನಮ್ಮ ಸೋಲಿಗೆ ಅನೇಕ ಕಾರಣಗಳಿವೆ. ಗ್ಯಾರಂಟಿ ಯೋಜನೆಗಳು ಕೈ ಹಿಡಿದಿಲ್ಲ ಎಂಬ ಮನವರಿಕೆ ಆಗಿದೆ.  ನಿಮ್ಮ ಗ್ಯಾರಂಟಿ ಅವಶ್ಯಕತೆ ಇಲ್ಲ ಅಂತ ಜನ ತೀರ್ಮಾನ ಮಾಡಿದ್ದಾರೆ. ಇದನ್ನ ಮುಂದುವರೆಸಬೇಕೇ ಬೇಡವೇ ಎಂಬುದನ್ನು ತೀರ್ಮಾನ ಮಾಡುವಷ್ಟು ದೊಡ್ಡವನು ನಾನಲ್ಲ.  ಸಿಎಂ ಮತ್ತು ಡಿಸಿಎಂ ಹಾಗೂ ಮಂತ್ರಿಮಂಡಲ ಎಲ್ಲಾ ಇದೆ. ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಇನ್ನು ಹೃದಯವಂತ, ಹೊಸ ಮುಖ ಅಂತ ಜನ ಬಿಜೆಪಿಗೆ ಓಟ್ ನೀಡಿದ್ದಾರೆ. ರಾಜಕೀಯದಲ್ಲಿ ಇಂಥ ಸೋಲಿನ ಸಾಕಷ್ಟು ಉದಾಹರಣೆಗಳು ಇವೆ. ಇಂದಿರಾಗಾಂಧಿ, ವಾಜಪೇಯಿಯಂಥವರೇ ಸೋತಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.

Key words: congress, MLA, Balakrishna, guarantee

Tags :

.