HomeBreaking NewsLatest NewsPoliticsSportsCrimeCinema

ರೈತರ ನೆರವಿಗೆ ಬರಬೇಕೆಂಬ ಆಸಕ್ತಿ ಇಲ್ಲ: ಪರಿಹಾರ ಹಣವನ್ನಾದ್ರೂ ಪ್ರಾಮಾಣಿಕವಾಗಿ ತಲುಪಿಸಿ- ಮಾಜಿ ಸಚಿವ ಸಿ.ಟಿ ರವಿ.

06:28 PM Apr 27, 2024 IST | prashanth

ಚಿಕ್ಕಮಗಳೂರು, ಏಪ್ರಿಲ್, 27, 2024 (www.justkannada.in): ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಬರಪರಿಹಾರದ ಹಣವನ್ನ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ  ಮಾಜಿ ಸಚಿವ ಸಿ.ಟಿ ರವಿ ಚಾಟಿ ಬೀಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ರಾಜ್ಯ ಸರ್ಕಾರಕ್ಕೆ ರೈತರ ನೆರವಿಗೆ ಬರಬೇಕೆಂಬ ಆಸಕ್ತಿ ಇಲ್ಲ. ರೈತರ ವಿಚಾರದಲ್ಲಿ ರಾಜಕಾರಣ ಮಾಡಬೇಕೆಂಬ ಆಸಕ್ತಿ ಇತ್ತು.  ಈಗ ಬಿಡುಗಡೆಯಾದ ಹಣವನ್ನಾದರೂ ಪ್ರಾಮಾಣಿಕವಾಗಿ ತಲುಪಿಸಿ ಎಂದರು.

ಓರ್ವ ಸಚಿವರು ಹಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ. ಸಂಕಷ್ಟಕ್ಕೊಳಗಾಗಿ ಹತಾಶೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ.  ಹಣಕ್ಕಾಗಿ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ತಾರಾ..?  ಎಂದು ಸಿಟಿ ರವಿ ಪ್ರಶ್ನಿಸಿದರು.

ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನ ಬಿಡುಗಡೆ ಮಾಡಿ. ಇವರು ಜಾಹೀರಾತು ಕೊಡುವ ಹಣದಲ್ಲಿ ಅರ್ಧ ಸಬ್ಸಿಡಿ ನೀಡಬಹುದಿತ್ತು ಎಂದು ಸಿ.ಟಿ ರವಿ ಕಿಡಿಕಾರಿದರು.

Key words: congress, no interest, helping, farmers, CT Ravi

Tags :
congress-no interest - helping – farmers-CT Ravi.
Next Article