HomeBreaking NewsLatest NewsPoliticsSportsCrimeCinema

ಬಾಂಡ್ ಮೂಲಕ ಸಂಗ್ರಹಿಸಿದ ನೀವು ಸಂಗ್ರಹಿಸಿದ 7600 ಕೋಟಿ ಹಣಕ್ಕೆ ತೆರಿಗೆ ಕಟ್ಟಿದ್ದೀರಾ? ಈಗ ಯಾರನ್ನು ಜೈಲಿಗೆ ಕಳುಹಿಸಬೇಕು ಮೋದಿಯವರೇ: ಸಿ.ಎಂ ಪ್ರಶ್ನೆ

06:39 PM Apr 12, 2024 IST | mahesh

ನಂಜನಗೂಡು ಏ 12, 2024 : (www.justkannada.in news) ಬಾಂಡ್ ಮೂಲಕ ನೀವು ಸಂಗ್ರಹಿಸಿದ 7600 ಕೋಟಿ ಹಣಕ್ಕೆ ತೆರಿಗೆ ಕಟ್ಟಿದ್ದೀರಾ ಮೋದಿಯವರೇ? ಈಗ ಯಾರನ್ನು ಜೈಲಿಗೆ ಕಳುಹಿಸಬೇಕು ಮೋದಿಯವರೇ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ಚಾಮರಾಜನಗರ ಲೋಕಾಭಾ ಕ್ಷೇತ್ರದ ನಂಜನಗೂಡಿನಲ್ಲಿ ನಡೆದ ಬೃಹತ್ ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಮೋದಿಯವರು ನೆನ್ನೆ ಭಾಷಣ ಮಾಡಿದ್ದಾರೆ. ಆದರೆ ದೇಶದಲ್ಲಿದ್ದ ಭ್ರಷ್ಟರೆಲ್ಲಾ ಈಗ ಯಾವ ಪಕ್ಷದಲ್ಲಿದ್ದಾರೆ ಮೋದಿಯವರೇ ಎಂದು ಮತ್ತೊಂದು ಪ್ರಶ್ನೆ ಹಾಕಿದರು.

ಐಟಿ, ಸಿಬಿಐ ದುರುಪಯೋಗ ಪಡೆಸಿಕೊಂಡು ಇಬ್ಬರು ಮುಖ್ಯಮಂತ್ರಿಗಳಾದ ಕೇಜರಿವಾಲ್ ಮತ್ತು ಹೇಮಂತ್ ಸುರೇನ್ ಅವರನ್ನು ಜೈಲಿಗೆ ಕಳಯಹಿಸಿದ ಮೋದಿಯವರೇ BJP ಸಂಗ್ರಹಿಸಿದ 7600 ಕೋಟಿ ಹಣಕ್ಕೆ ಒಂದು ಪೈಸೆ ತೆರಿಗೆ ಕಟ್ಟಿಲ್ಲವಲ್ಲಾ ಈ ಹಗರಣಕ್ಕಾಗಿ ಯಾರನ್ನು ಜೈಲಿಗೆ ಕಳುಹಿಸಬೇಕು ಹೇಳಿ ಎಂದು ಮೋದಿಯವರನ್ನು ಪ್ರಶ್ನಿಸಿದರು.

ಮೋದಿಯವರಾಗಲೀ, ಬಿಜೆಪಿಯವರಾಗಲೀ ಇವತ್ತಿನವರೆಗೂ ಯುವಕರು, ಉದ್ಯೋಗ, ಮಹಿಳೆಯರು, ಶೂದ್ರರು, ದಲಿತರು, ಶ್ರಮಿಕರು, ದುಡಿಯುವವರ ಪರವಾಗಿ ಇವತ್ತಿನವರೆಗೂ ಒಂದೂ ಸರಿಯಾದ ಕಾರ್ಯಕ್ರಮ ಮಾಡಲಿಲ್ಲವಲ್ಲಾ ಇದೇನಾ ಅಚ್ಛೆ ದಿನ್ ಎಂದು ಪ್ರಶ್ನಿಸಿದರು.

ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಬೆಲೆ ಆಕಾಶಕ್ಕೆ ಏರಿಸಿದ್ದೀರಲ್ಲಾ ಮೋದಿಯವರೇ? ಇದಾ ನಿಮ್ಮ ಅಭಿವೃದ್ಧಿ ಎನ್ನುತ್ತಾ ಪ್ರಧಾನಿ ಮೋದಿಯವರ ಸಾಲು ಸಾಲು ಸುಳ್ಳುಗಳನ್ನು ಪಟ್ಟಿ ಮಾಡಿ ಪ್ರಶ್ನಿಸಿದರು.

ನೀವು ದೇಶ ಭಕ್ತರಾ? ಮುಖ ನೋಡಿಕೊಳ್ಳಿ

ನೀವು ದೇಶಭಕ್ತರಾಗಿದ್ರೆ, ಭಾರತ ಮಾತೆ ಬಗ್ಗೆ ಪ್ರೀತಿ ಇದ್ದಿದ್ರೆ ನೀವೇಕೆ ದೇಶದ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಲಿಲ್ಲ ?

ಮಹಾತ್ಮಗಾಂಧಿಯವರ ನೇತೃತ್ಬದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಹುತಾತ್ಮರಾದ ಸಂಘ ಪರಿವಾರದ ಒಬ್ಬೇ ಒಬ್ಬನನ್ನು,  ಬಿಜೆಪಿಯ ಒಬ್ಬ ದೇಶಕ್ಕಾಗಿ ಹುತಾತ್ಮರಾಗಿದ್ರೆ ತೋರಿಸಿ, ನಾನು ರಾಜಕೀಯ ಬಿಟ್ಟು ಬಿಡ್ತೀನಿ ಎಂದು ಸಿ.ಎಂ. ನೇರ ಸವಾಲು ಹಾಕಿದರು.

ದೇಶಕ್ಕಾಗಿ ಏನೇನೂ ಮಾಡದವರಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕಾ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಕತ್ರಿ ಹಾಕೋದ್ರಲ್ಲಿ ನಿಸ್ಸೀಮರು

ಬಿಜೆಪಿಯವರು ಕತ್ರಿ ಹಾಕೋದ್ರಲ್ಲಿ ನಿಸ್ಸೀಮರು. ಬಿಜೆಪಿಗೆ ಓಟು ಹಾಕುವ ಬಡವರೂ ಸೇರಿ ಇಡಿ ರಾಜ್ಯದ ಬಡವರು ಹೊಟ್ಟೆ ತುಂಬ ಊಟ ಮಾಡಲಿ ಅಂತ ನಾವು ಅಕ್ಕಿ ಕೊಟ್ರೆ, ಈ ಬಿಜೆಪಿಯವರು ಬಂದು ಕತ್ರಿ ಹಾಕಿಬಿಟ್ಟರು. ಈಗ ನಾವು ಮತ್ತೆ ಅಧಿಕಾರಕ್ಕೆ ಬಂದು ಹತ್ತು ಕೆಜಿ ಅಕ್ಕಿ ಕೊಡ್ತಾ ಇದೀವಿ ಎಂದರು.

ಬಿಜೆಪಿ-ಜೆಡಿಎಸ್ ಇಬ್ಬರಿಗೂ ಜನಪರವಾದ ಸಿದ್ಧಾಂತ ಮತ್ತು ಬದ್ಧತೆ ಇಲ್ಲದಿರುವುದರಿಂದ ನಾಡಿನ ಜನತೆ ಎರಡೂ ಪಕ್ಷಗಳನ್ನು ತಿರಸ್ಕರಿಸಿದ್ದಾರೆ.

ಸಚಿವರಾದ ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ವೆಂಕಟೇಶ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ತನ್ವೀರ್ ಸೇಠ್, ಜಿಲ್ಲೆಯ ಶಾಸಕರುಗಳಾದ ದರ್ಶನ್ ದ್ರುವನಾರಾಯಣ್, ಗಣೇಶ್ ಮಹದೇವ್ ಪ್ರಸಾದ್, ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ಕೇಶವಮೂರ್ತಿ, ಡಿಸಿಸಿ ಅಧ್ಯಕ್ಷ ವಿಜಯ್ ಕುಮಾರ್ ಸೇರಿ ಹಲವು ಮಂದಿ ಜಿಲ್ಲಾ, ತಾಲ್ಲೂಕು, ಬ್ಲಾಕ್ ಮುಖಂಡರುಗಳು ಉಪಸ್ಥಿತರಿದ್ದರು.

key words :  Congress, Siddaramaiah, Mysore, election

 

summary : 

Have you paid tax on the Rs 7,600 crore you have raised through bonds, Modiji? "Modi ji tell me who should be sent to jail now," Siddaramaiah said.

He was speaking after inaugurating a massive public meeting at Nanjangud in Chamarajanagar Lok Sabha constituency.

 

Tags :
congresselectionMysore.Siddaramaiah
Next Article