ಕಾಂಗ್ರೆಸ್ ನವರು ಮೋಸದಿಂದ 9 ಸ್ಥಾನ ಗೆದ್ದಿದ್ದಾರೆ- ಗೋವಿಂದ ಕಾರಜೋಳ.
04:25 PM Jun 05, 2024 IST | prashanth
ಬೆಂಗಳೂರು,ಜೂನ್,5,2024 (www.justkannada.in): ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನವರು ಮೋಸದಿಂದ 9 ಸ್ಥಾನ ಗೆದ್ದಿದ್ದಾರೆ ಎಂದು ಚಿತ್ರದುರ್ಗ ಕ್ಷೇತ್ರದ ವಿಜೇತ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೋವಿಂದ ಕಾರಜೋಳ, ಕಾಂಗ್ರೆಸ್ಸಿಗರು ಅಡ್ವಾನ್ಸ್ ಆಗಿ ಗ್ಯಾರಂಟಿ ಕೊಟ್ಟು ಮೋಸ ಮಾಡಿದರು. ಒಂದು ವರ್ಷದಲ್ಲಿ ಯಾವುದೇ ಅಭಿವೃದ್ದಿ ಮಾಡಲಿಲ್ಲ ಇಲ್ಲಿ ಲೂಡಿ ಹೊಡೆದು ನೆರೆ ರಾಜ್ಯಗಳಿಗೆ ಹಣ ಕಳಿಸಿದರು. ಮೋಸದಿಂದ 9 ಸ್ಥಾನ ಗೆದ್ದರು. ಮೋಸದಿಂದ ಗೆದ್ದ ಕಾಂಗ್ರೆಸ್ ನಿಜವಾದ ಗೆಲುವಲ್ಲ ಎಂದರು.
ಲೋಕಸಭೆ ಚುನಾವಣೆಯಲ್ಲಿ ಜಯಸಾಧಿಸಿದ್ದು, ಜನರ ನಿರೀಕ್ಷಷೆಯಂತೆ ನಾವು ಕೆಲಸ ಮಾಡುತ್ತೇವೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
Key words: Congress, won, fraudulently, Govinda Karajola