HomeBreaking NewsLatest NewsPoliticsSportsCrimeCinema

ಲೋಕಸಮರದಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನೂ ಗೆಲ್ಲಲ್ಲ-ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ.

03:03 PM Feb 07, 2024 IST | prashanth

ನವದೆಹಲಿ,ಫೆಬ್ರವರಿ,7,2024(www.justkannada.in): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು  ಗೆಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದರು.

ಇದು ಅವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಪ್ರತಿಪಕ್ಷಗಳ ಆಲೋಚನೆ ಹಳೆಯದು ಮತ್ತು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಕ್ಕಿಂತ ಹೆಚ್ಚು ಸ್ಥಾನಗಳನ್ನು ದಾಟುವುದಿಲ್ಲ. ಕಾಂಗ್ರೆಸ್ ನವರು ಜಾತಿ ಬಗ್ಗೆ ನಮಗೆ ಪಾಠ ಮಾಡುತ್ತಾರೆ. ಕಾಂಗ್ರೆಸ್ ದ‍ಲಿತರು, ಬಡವರು ಆದಿವಾಸಿಗಳ ವಿರೋಧಿ. ಬಾಬಾಸಾಹೇಬ ಡಾ.ಬಿಆರ್ ಅಂಬೇಡ್ಕರ್ ಇಲ್ಲದಿದ್ದರೇ ಎಸ್ ಸಿ, ಎಸ್ಟಿ ಸಮುದಾಯಕ್ಕೆ ಸ್ಥಾನಮಾನ ಸಿಗುತ್ತಿರಲಿಲ್ಲ ಎಂದರು.

ಕಳೆದ 10 ವರ್ಷಗಳಲ್ಲಿ ನನ್ನ ಪರಿಚಯ ಆಗಿರಬಹುದು ಇತ್ತೀಚೆಗೆ ನಾನು ಪಂಡಿತ್ ನೆಹರು ಅವರನ್ನ ನೆನಪಿಸುತ್ತೇನೆ. ನೆಹರು   ಅವರು ಸಿಎಂಗೆ ಪತ್ರ ಬರೆದಿದ್ದರು ನಾನು ಆ ಪತ್ರದ ಅನುವಾದ ಓದಿದ್ದೆ.  ಎಸ್ ಸಿ ಮತ್ತು ಎಸ್ ಟಿ, ಒಬಿಸಿಗಳಿಗೆ ಮೀಸಲಾತಿ ಸಿಕ್ಕರೆ ಸರ್ಕಾರಿ ಕೆಲಸದ ಗೌರವ ಕುಸಿಯುತ್ತದೆ ಎಂದು ಬರೆದಿದ್ದರು ಎಂದು ಟೀಕಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಭಾರತದ ಸಾಮರ್ಥ್ಯ, ಶಕ್ತಿ ಮತ್ತು ಉಜ್ವಲ ಭವಿಷ್ಯದ ಬಗ್ಗೆ ಮಾತನಾಡಿದರು. ನಾನು ಅಧ್ಯಕ್ಷರಾದ ದ್ರೌಪದಿ ಮುರ್ಮು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು.

Key words: Congress -won't - win 40 seats - LokSabha election- PM Modi

Tags :
Congress -won't - win 40 seats - LokSabha election- PM Modi
Next Article