For the best experience, open
https://m.justkannada.in
on your mobile browser.

ಸಂವಿಧಾನದ ಆಶಯಗಳು ಜಾರಿಗೆ ಬರಬೇಕಾದ್ರೆ ಮೋದಿ ಮುಕ್ತ ಭಾರತ ಆಗಬೇಕು- ಪ್ರೊ.ಮಹೇಶ್ ಚಂದ್ರಗುರು.

01:29 PM Dec 27, 2023 IST | prashanth
ಸಂವಿಧಾನದ ಆಶಯಗಳು ಜಾರಿಗೆ ಬರಬೇಕಾದ್ರೆ ಮೋದಿ ಮುಕ್ತ ಭಾರತ ಆಗಬೇಕು  ಪ್ರೊ ಮಹೇಶ್ ಚಂದ್ರಗುರು

ಮೈಸೂರು,ಡಿಸೆಂಬರ್,27,2023(www.justkannada.in):  ದೇಶದಲ್ಲಿ ಸಂವಿಧಾನದ ಆಶಯಗಳು ಜಾರಿಗೆ ಬರಬೇಕಾದರೆ  ಮೋದಿ ಮುಕ್ತ ಭಾರತ ಆಗಬೇಕು ಎಂದು ಪ್ರೊ.ಮಹೇಶ್ ಚಂದ್ರಗುರು ಹೇಳಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರೊ.ಮಹೇಶ್ ಚಂದ್ರಗುರು, ಜಾತಿಗನುಗುಣವಾಗಿ ಜಾರಿ ಮಾಡುವ ವರದಿಯಲ್ಲಿ ಬಹು ಸಂಖ್ಯಾತರ ಜೀವನ ಅಡಗಿದೆ. ನಾವೆಲ್ಲರೂ ಬುದ್ಧನ ಅನುಯಾಯಿಗಳು ಶಾಂತಿ ಪ್ರಿಯರು ಎಂದರು.

ಸಂಸತ್ ನಲ್ಲಿ ನಡೆದ ಸ್ಮೋಕ್ ದಾಳಿ ಪ್ರಕರಣವು ಕೇಂದ್ರ ಸರ್ಕಾರದ ಬಹು ದೊಡ್ಡ ನಿರ್ಲಕ್ಷ್ಯ. ಸಂಸತ್ ನಲ್ಲಿನ ಸಂಸದರಿಗೆ ಭದ್ರತೆ ನೀಡದ ಸರ್ಕಾರ ಬಹು ಸಂಖ್ಯಾತರನ್ನ ಹೇಗೆ ರಕ್ಷಣೆ ಮಾಡುತ್ತಾರೆ. ಹೀಗಾಗಿ 21ನೇ ಶತಮಾನದಲ್ಲಿ ನರ ಮಂಡಲ ಚಳುವಳಿ ಆಗಬೇಕು. ಪ್ರತಿಯೊಂದು ಸಮುದಾಯಕ್ಕೂ ಜಾತಿಗನುಗುಣವಾಗಿ ಆರ್ಥಿಕ ಸಾಮಾಜಿಕ ಆಸ್ತಿ ಎಲ್ಲವನ್ನು ಸಮಾನವಾಗಿ ಹಂಚಬೇಕು. ಶ್ರೀಮಂತರಿಂದ ಶ್ರೀಮಂತರಿಗಾಗಿ ಶ್ರೀಮಂತರಿಗೋಸ್ಕರ ಇರುವ ಯಾವುದಾದರು ಸರ್ಕಾರ ಇದ್ದರೆ ಅದು ಮೋದಿ ಸರ್ಕಾರ. ಮೋದಿ ಯುಗದಲ್ಲಿ ಬಡ ಸಾಮಾನ್ಯರಿಗೆ ಬದುಕಲು ಸಾಧ್ಯವಿಲ್ಲ. ಬಿಲಿಯನ್ ಮಿಲಿಯನ್ ಗು ವ್ಯತ್ಯಾಸ ಗೊತ್ತಿಲ್ಲದ ನಿರ್ಮಲಾ ಸೀತಾರಾಮನ್ ನಮ್ಮ ದೇಶದ ವಿತ್ತ ಸಚಿವರು. ದೇಶದಲ್ಲಿ ಅಪೌಷ್ಟಿಕತೆ, ಬಡತನ, ದೌರ್ಜನ್ಯಗಳು ಹೆಚ್ಚಾಗುತ್ತಿದೆ. ನಮ್ಮ ಹಕ್ಕಿಗಾಗಿ ನಾವು ಇಡೀ ದೇಶಾದ್ಯಂತ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. ಅಸಮಾನತೆ ಮುಕ್ತ, ಹಸಿವು ಮುಕ್ತ ಕರ್ನಾಟಕ ಆಗಿದ್ದು ಬಸವಣ್ಣನವರ ಕಾಲದಲ್ಲಿ ಎಂದು ಪ್ರೊ. ಮಹೇಶ್ ಚಂದ್ರಗುರು ಹೇಳಿದರು.

ಹಸಿವುಮುಕ್ತ, ನಿರುದ್ಯೋಗ ಮುಕ್ತದೇಶ ಮಾಡುವಲ್ಲಿ ಮೋದಿ ವಿಫಲರಾಗಿದ್ದಾರೆ. ಭಾರತ ದೇಶದ 130ಕೋಟಿ ಜನರ ಪ್ರಧಾನಿಯಾಗಿಲ್ಲ. ಕೇವಲ ಕೆಲವೇ ಶ್ರೀಮಂತ ಮಂದಿಗಳಿಗೆ ಮೋದಿ ಪ್ರಧಾನಿಯಾಗಿದ್ದಾರೆ. ಮೋದಿ ಹಠವೋ ಚಳುವಳಿ ಆಗಬೇಕು. 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಮುಕ್ತ ಭಾರತ ಆಗಬೇಕು. ಪ್ರಧಾನಿ ಮೋದಿ ಅವರನ್ನ ಕಿತ್ತೆಸೆಯಬೇಕು. ಹಿಂದೂ ಧರ್ಮದಲ್ಲಿ ಹಿಂದುಳಿದ ಸಮುದಾಯಗಳು ಸುರಕ್ಷಿತವಾಗಿಲ್ಲ. ಸಂವಿಧಾನದ ಆಶಯಗಳು ಜಾರಿಗೆ ಬರಬೇಕೆಂದರೆ. ಮೋದಿ ಮುಕ್ತ ಭಾರತ ಆಗಬೇಕು. ಕರ್ನಾಟಕದಲ್ಲಿ ಬಿಜೆಪಿಯನ್ನ ತೊಲಗಿಸಿದ್ದಾರೆ. ಅದೇ ರೀತಿ ದೇಶದಲ್ಲಿ ಮೋದಿಯನ್ನ ಕಿತ್ತೆಸೆಯಬೇಕು ಎಂದು ಪ್ರೊ.ಮಹೇಶ್ ಚಂದ್ರಗುರು ಹೇಳಿದರು.

ಇನ್ನು ನಿನ್ನೆ ನಂಜನಗೂಡಿನಲ್ಲಿ ನಡೆದ ಘಟನೆ ಬೇರೆಲ್ಲೂ ನಡೆಯಬಾರದು. ರಕ್ಷಕರನ್ನ ನೀವು ರಾಕ್ಷಸರೆಂದು ಕರೆಯುತ್ತಿದ್ದೀರಾ. ದೇಶದಲ್ಲಿ ಹಿಂಸೆ ಮುಕ್ತ ಕ್ರಾಂತಿ ಆಗಬೇಕು ಎಂದು ಪ್ರೊ ಮಹೇಶ್ ಚಂದ್ರಗುರು ತಿಳಿಸಿದರು.

Key words: constitution –implemented-Modi –free- India - Prof. Mahesh Chandraguru-mysore

Tags :

.