ಅಯೋಧ್ಯೆ ರಾಮಮಂದಿರ ನಿರ್ಮಾಣ ಶತಮಾನಗಳ ಕನಸು ನನಸು-ರಾಷ್ಟ್ರಪತಿ ದ್ರೌಪದಿ ಮುರ್ಮು.
ನವದೆಹಲಿ, ಜನವರಿ,31,2024(www.justkannada.in): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ ರಾಮಮಂದಿರ ನಿರ್ಮಾಣ ಶತಮಾನಗಳ ಕನಸು ನನಸಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ನುಡಿದರು.
ಇಂದಿನಿಂದ ಸಂಸತ್ ಅಧಿವೇಶನ ಆರಂಭವಾಗಿದ್ದು ಜಂಟಿ ಸದನ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಇದು ನನ್ನ ಮೊದಲ ಬಜೆಟ್ ಅಧಿವೇಶನ. ಆರ್ಥಿಕತೆಯಲ್ಲಿ ಭಾರತ ಇಂದು ಮುನ್ನುಗ್ಗುತ್ತಿದೆ ವಿಶ್ವದ ಆರ್ಥಿಕತೆಯಲ್ಲಿ ಉನ್ನತ ಸ್ಥಾನದತ್ತ ಮುನ್ನುಗ್ಗುತ್ತಿದೆ ಚಂದ್ರನ ದಕ್ಷಿಣ ದ್ರುವದಲ್ಲಿ ನೌಕೆ ಇಳಿಸಿ ಭಾರತ ಸಾಧನೆ ಮಾಡಿದೆ. ಯಾರೂ ನೌಕೆ ಇಳಿಸದ ಜಾಗದಲ್ಲಿ ಭಾರತ ಸಾಧನೆ ಮಾಡಿದೆ ಎಂದು ಇಸ್ರೋ ವಿಜ್ಞಾನಿಗಳ ಸಾಧನೆ ಕೊಂಡಾಡಿದರು.
ಜಮ್ಮುಕಾಶ್ಮೀರದ 370ನೇ ವಿಧಿ ತೆಗೆದು ಹಾಕಲಾಗಿದೆ. ಪಕ್ಕದ ದೇಶದ ಪೀಡಿತ ಜನರಿಗೆ ಆಶ್ರಯ ನೀಡಲಾಗಿದೆ. ರಾಮಮಂದಿರ ನಿರ್ಮಾಣದ ಮೂಲಕ ಶತಮಾನದ ಬಯಕೆ ಈಡೇರಿದೆ. ಹೊಸ ಸಂಸತ್ ಭವನ ಏಕ ಭಾರತ ಉತ್ತಮ ಭಾರತದ ಸಂಕಲ್ಪ ಹೊಂದಿದೆ. ಈಗ ನಮ್ಮ ಆಧ್ಯತೆ ನ್ಯಾಯಕ್ಕೆ ನೀಡಲಾಗಿದೆ ಶಿಕ್ಷೆಗೆ ಅಲ್ಲ. ಬ್ರಿಟಿಷರ ಕಾಲದ ಕಾನೂನು ಬದಲಾಗಿದೆ. ಡಿಜಿಟಲ್ ಕ್ಷೇತ್ರದಲ್ಲೂ ಭಾರತ ಸಾಧನೆ ಮಾಡಿದೆ ಎಂದು ಹೇಳಿದರು.
Key words: construction – Ayodhya- Ram Mandir – fulfilled-dream- President-Draupadi Murmu.