HomeBreaking NewsLatest NewsPoliticsSportsCrimeCinema

ಕಲುಷಿತ ನೀರು ಸೇವಿಸಿ ಸಾವು ಕೇಸ್: ಮೈಸೂರು ಡಿಎಚ್ ಒಗೆ ಕರೆ ಮಾಡಿ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ.

12:43 PM May 21, 2024 IST | prashanth

ಮೈಸೂರು,ಮೇ,21,2024 (www.justkannada.in): ಮೈಸೂರಿನ ಕೆ. ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಸಾವು ಸಂಭವಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದುಕೊಂಡರು.

ನೀರು ಕಲುಷಿತಗೊಳ್ಳಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಎಂ  ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಲುಷಿತ ನೀರು ಸೇವನೆಯಿಂದ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವವರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಆದೇಶಿಸಿದರು.

ಸಿಎಂ ಕರೆ ಮಾಡಿದ ವೇಳೆ ಮಾಹಿತಿ ನೀಡಿದ ಡಿಎಚ್ ಒ ಅವರು, ಜಿಲ್ಲಾಸ್ಪತ್ರೆ ಹಾಗೂ ಕೆಆರ್. ಆಸ್ಪತ್ರೆಯಲ್ಲಿ ತಲಾ 25 ಬೆಡ್ ಕಾದಿರಿಸಲಾಗಿದೆ. ಬೇಧಿ ಕಾಣಿಸಿಕೊಂಡವರಲ್ಲಿ‌ ಮೂರರಿಂದ ನಾಲ್ಕು ಜನರಿಗೆ ಕಾಲರಾ ಲಕ್ಷಣ ಸಾಧ್ಯತೆ ಇದೆ. ಸದ್ಯ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು. ಈ ವೇಳೆ ಪದೇ ಪದೇ ಮಾಹಿತಿ ನೀಡುತ್ತಿರಿ ಎಂದು ಡಿಎಚ್ ಓಗೆ  ಸಿಎಂ ಸಿದ್ದರಾಮಯ್ಯ ಸೂಚಿಸಿದರು.

Key words: consumption, contaminated, water, CM Siddaramaiah

Tags :
CM SiddaramaiahConsumptioncontaminatedDHOwater
Next Article