ಮೈಸೂರು: ಅನಿಲ ಸೋರಿಕೆ, ಕಲುಷಿತ ನೀರು ಸೇವನೆ, ಮೃತರ ಕುಟುಂಬಕ್ಕೆ ಸಿಎಂ ಸಾಂತ್ವನ.
ಮೈಸೂರು,ಮೇ.23, 2024 : (www.justkannada.in news )ಇಲ್ಲಿನ ಯರಗನಹಳ್ಳಿಯಲ್ಲಿ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ.
ಮೃತರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ. ದುರಂತ ಘಟನೆ ಕುರಿತು ಮಾಹಿತಿ ಪಡೆದುಕೊಂಡ ಸಿಎಂ. ಸ್ಥಳೀಯ ಶಾಸಕ ತನ್ವೀರ್ ಸೇಠ್ ಸೇರಿದಂತೆ ಕಾಂಗ್ರೆಸ್ ನಾಯಕರು ಉಪಸ್ಥಿತಿ. ಸಿಎಂ ಭೇಟಿ ಹಿನ್ನೆಲೆಯಲ್ಲಿ ಯರಗನಹಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್.
ಕುಮಾರಸ್ವಾಮಿ ಅವರ ಇಡೀ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ. ಅವರ ಪತ್ನಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಗ್ಯಾಸ್ ಲೀಕ್ ಆಗಿ ಇಡೀ ಕುಟುಂಬದವರು ಮೃತಪಟ್ಟಿದ್ದಾರೆ. ಗಂಡ ಹೆಂಡತಿ ಇಬ್ಬರು ಒಳಗೆ ಮಲಗಿದ್ದರು. ಇಬ್ಬರು ಮಕ್ಕಳು ಹೊರಗಡೆ ಹಾಲ್ ನಲ್ಲಿ ಮಲಗಿದ್ದರು. ಎಲ್ಲರೂ ಕೂಡ ನಿದ್ರೆಯಲ್ಲೇ ಪ್ರಾಣ ಬಿಟ್ಟಿದ್ದಾರೆ. ಅವರ ತಂದೆ ಮೂಲತಃ ಚಿಕ್ಕಮಗಳೂರಿನ ಕಡೂರಿನವರು. ಇವರು ಮೈಸೂರಿಗೆ ಬಂದು 20 ವರ್ಷವಾಗಿದೆ. ಚಿಕ್ಕಮನೆಯಲ್ಲಿ ವಾಸವಾಗಿದ್ದರು. ಅವರ ಕುಟುಂಬಸ್ತರೆಲ್ಲ ಇದೇ ಮೊಹಲ್ಲಾದ ನಿವಾಸಿಗಳಾಗಿದ್ದಾರೆ.
ನಾನು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಮೃತಪಟ್ಟ ನಾಲ್ವರನ್ನು ಸೇರಿ ತಲಾ 3 ಲಕ್ಷದಂತೆ ಒಟ್ಟು 12 ಲಕ್ಷ ಪರಿಹಾರವನ್ನು ಸಚಿವ ಮಹದೇವಪ್ಪ ಘೋಷಿಸಿದ್ದರು. ಅದಕ್ಕೆ ನಾನು ಅನುಮೋದನೆ ನೀಡಿದ್ದೇನೆ. ಮೃತರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ದೊರಕಲಿ. ದುಃಖ ಭರಿಸುವ ಶಕ್ತಿ ದೇವರು ನೀಡಲಿ. ಮೈಸೂರಿನ ಯಗನಹಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
ಕಲುಷಿತ ನೀರು ಸೇವಿಸಿ ಯುವಕ ಮೃತ :
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ತಾಲ್ಲೂಕಿನ ಜಯಪುರದ ಕೆ.ಸಾಲುಂಡಿ ಗ್ರಾಮಕ್ಕೆ ಭೇಟಿನೀಟಿ ಕಲುಷಿತ ನೀರು ಕುಡಿದು ಮೃತಪಟ್ಟ ಕಾಂತರಾಜು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ವೈಯುಕ್ತಿಕವಾಗಿ ನಗದು ಪರಿಹಾರ ನೀಡಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದಿಂದ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಮೃತ ಕಾಂತರಾಜು ಅವರ ಪುತ್ರ ರವಿಗೆ ಕೆಲಸ ಕೊಡಿಸುವ ಭರವಸೆ ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರದಿಂದ 5 ಬಾರಿ ಗೆದ್ದಿದ್ದೇನೆ. ಕೆ.ಸಾಲುಂಡಿ ಜನ ನೂರಕ್ಕೆ ನೂರರಷ್ಟು ನನಗೆ ಮತ ಹಾಕುತ್ತಿದ್ದರು. ಘಟನೆಗೆ ಕಾರಣವಾದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇನೆ. ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ತಾಕೀತು ಮಾಡಿದ್ದೇನೆ. ಯುವಕ ಕಾಲರ ಬಂದು ಸತ್ತಿಲ್ಲ, ಕಲುಷಿತ ನೀರಿನಿಂದ ಸತ್ತಿರೊದು. ಇಂತಹ ಘಟನೆ ಮರುಕಳಿಸಿದ್ರೆ ಸಿಇಓ ಆದ್ರೂ ಬಿಡೋದಿಲ್ಲ. ಕೆ.ಸಾಲುಂಡಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
key words: Mysore, Gas leak, consumption of contaminated water, CM condoles the family of the deceased.
summary:
Four members of the same family died due to gas leakage in Yaraganahalli. Chief Minister Siddaramaiah visited the incident site.
I have met his family members and consoled them. Minister Mahadevappa had announced a total compensation of Rs 12 lakh for the four deceased including Rs 3 lakh each. I have approved it.