For the best experience, open
https://m.justkannada.in
on your mobile browser.

ಕಂಟ್ರೋಲ್ ರೂಂಗಳ ಸ್ಥಾಪನೆ:  ಕಲುಷಿತ ನೀರು ಸರಬರಾಜು ಕಂಡು ಬಂದಲ್ಲಿ ದೂರು ದಾಖಲಿಸಿ.

04:39 PM May 22, 2024 IST | prashanth
ಕಂಟ್ರೋಲ್ ರೂಂಗಳ ಸ್ಥಾಪನೆ   ಕಲುಷಿತ ನೀರು ಸರಬರಾಜು ಕಂಡು ಬಂದಲ್ಲಿ ದೂರು ದಾಖಲಿಸಿ

ಮೈಸೂರು,ಮೇ, 22,2024 (www.justkannada.in):  ಮೈಸೂರು ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಅಥವಾ ಪ್ರವಾಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಕಲುಷಿತ ನೀರು ಸರಬರಾಜಾಗುತ್ತಿದ್ದಲ್ಲಿ ಹಾಗೂ ಕಲುಷಿತ ನೀರು ಸೇವನೆಯಿಂದ ವಾಂತಿ ಭೇದಿ ಪ್ರಕರಣಗಳು ಕಂಡು ಬಂದಲ್ಲಿ ದೂರುಗಳನ್ನು ದಾಖಲಿಸಲು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕಛೇರಿಗಳಲ್ಲಿ 24x7 ಕಂಟ್ರೋಲ್ ರೂಂ ಅನ್ನು ತೆರೆಯಲಾಗಿದೆ.

ಜಿಲ್ಲಾಧಿಕಾರಿಗಳ ಕಚೇರಿಯ ದೂ.ಸಂ:0821-2423800,1077, ತಾಲ್ಲೂಕು ಕಛೇರಿಗಳಾದ ಮೈಸೂರು ದೂ.ಸಂ:0821-2414812, ನಂಜನಗೂಡು ದೂ.ಸಂ:08221-223108, ತಿ.ನರಸೀಪುರ ದೂ.ಸಂ:08227-260210, ಹುಣಸೂರು ದೂ.ಸಂ:08222-252959, ಕೆ.ಆರ್.ನಗರ ದೂ.ಸಂ:08223-262371, ಸಾಲಿಗ್ರಾಮ ದೂ.ಸಂ:08223-283833, ಪಿರಿಯಾಪಟ್ಟಣ ದೂ.ಸಂ:08223-274175, ಹೆಚ್.ಡಿ.ಕೋಟೆ ದೂ.ಸಂ:08228-255325, ಸರಗೂರು ದೂ.ಸಂ:08228-296100 ನ್ನು ಸಂಪರ್ಕಿಸಿ ದೂರು ದಾಖಲಿಸಬಹುದು ಎಂದು ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: control rooms, complaint, contaminated, water

Tags :

.