ನಿಗಮ ಮಂಡಳಿ ನೇಮಕ: ಎರಡು ವರ್ಷದವರೆಗೆ ಮಾತ್ರ- ಡಿಸಿಎಂ ಡಿ.ಕೆ ಶಿವಕುಮಾರ್.
05:20 PM Jan 27, 2024 IST
|
prashanth
ಬೆಂಗಳೂರು,ಜನವರಿ,27,2024(www.justkannada.in): 32 ಶಾಸಕರಿಗೆ ನಿಗಮಮಂಡಳಿ ಅಧ್ಯಕ್ಷ ಸ್ಥಾನವನ್ನ ನೀಡಿ ನಿನ್ನೆ ಕೆಪಿಸಿಸಿ ಆದೇಶ ಹೊರಡಿಸಿದ್ದು ಈ ಬಗ್ಗೆ ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನಿಗಮಮಂಡಳಿ ನೇಮಕದ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ತೀರ್ಮಾನಿಸಿದ್ದೇವೆ. ಎಲ್ಲರಿಗೂ ಮಂತ್ರಿಯಾಗುವ ಆಸೆ ಇರುತ್ತದೆ. ಪಕ್ಷದಲ್ಲಿ ನಾವು ಕೆಲವರನ್ನ ಗುರುತಿಸಿದ್ದೇವೆ. ನಿಗಮಮಂಡಳಿ ಅಧ್ಯಕ್ಷ ಸ್ಥಾನ ಎರಡು ವರ್ಷದವರೆಗೆ ಮಾತ್ರ ಅಂತಾ ಹೇಳಿದ್ದೇವೆ. ಮುಂದಿನ ಎರಡು ವರ್ಷ ಉಳಿದವರಿಗೆ ನೀಡಬೇಕಾಗುತ್ತದೆ. ಯಾರೂ ಗಾಬರಿಪಡಬೇಕಾದ ಅವಶ್ಯಕತೆ ಇಲ್ಲ ಎಂದರು.
Key words: Corporation Board –Appointed-two years -only- DCM- DK Shivakumar.
Next Article