HomeBreaking NewsLatest NewsPoliticsSportsCrimeCinema

ಶುದ್ಧ ಹಸ್ತವಾಗಿದ್ದರೆ, ಭ್ರಷ್ಟರಾಗಿಲ್ಲ ಅಂದ್ರೆ ಸಿಬಿಐಗೆ ಯಾಕೆ ಹೆದರುತ್ತೀರಾ? ಸಿಎಂ ವಿರುದ್ದ ಆರ್.ಅಶೋಕ್ ವಾಗ್ದಾಳಿ

05:48 PM Aug 09, 2024 IST | prashanth

ಮೈಸೂರು,ಆಗಸ್ಟ್,9,2024 (www.justkannada.in): ನನ್ನ ನಲವತ್ತು ವರ್ಷದ ರಾಜಕೀಯದಲ್ಲಿ ಶುದ್ಧವಾಗಿದ್ದೇನೆ ಎಂದು ಸಿದ್ದರಾಮಯ್ಯ ನೂರು ಸಲ ಹೇಳಿದ್ದಾರೆ. ಹಾಗಾದರೇ ನೀವು ಶುದ್ಧ ಹಸ್ತವಾಗಿದ್ದರೆ, ಭ್ರಷ್ಟರಾಗಿಲ್ಲ ಅಂದ್ರೆ ಸಿಬಿಐಗೆ ಯಾಕೆ ಹೆದರುತ್ತೀರಾ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮೈಸೂರಿನಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ  ನಡೆದ ಹಿನ್ನೆಲೆ, ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಜನಾಂದೋಲನದಲ್ಲಿ ಸಿಎಂ ದೊಡ್ಡ ಮಟ್ಟದ ಭಾಷಣ ಮಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಹೇಳಿದ್ದೆ ಹೇಳೋ ಕಿಸಬಾಯಿ ದಾಸ ಎಂಬಂತೆ ಹೇಳಿದ್ದನ್ನೇ ಹೇಳಿದ್ದಾರೆ. ಈ ಸಮಾವೇಶಕ್ಕೆ ಜನರಿಗೆ ಕಾಸು ಕೊಟ್ಟು ಕರೆಸಿದ್ದಾರೆ. ಶಾಸಕರುಗಳಿಗೆ ಜನರನ್ನ ಕರೆ ತರಲು ಹೇಳಿದ್ದರು. ನನ್ನ ನಲವತ್ತು ವರ್ಷದ ರಾಜಕೀಯದಲ್ಲಿ ಶುದ್ಧವಾಗಿದ್ದೇನೆ ಎಂದು ನೂರು ಸಲ ಹೇಳಿದ್ದಾರೆ. ನೀವು ಶುದ್ಧ ಹಸ್ತವಾಗಿದ್ದರೆ, ಭ್ರಷ್ಟರಾಗಿಲ್ಲ ಅಂದ್ರೆ. ಯಾವ ಸಿಬಿಐ ನಿಮ್ಮನ್ನ ಏನು ಮಾಡಲಿಕ್ಕೆ ಆಗೋದಿಲ್ಲ. ನೀವು ತಪ್ಪು ಮಾಡಿಲ್ಲ ಅಂದ್ರೆ ಸಿಬಿಐ ಗೆ ಯಾಕೆ ಹೆದರುತ್ತಿದ್ದೀರಾ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಹಗರಣದಲ್ಲೂ ಇದೆ ರೀತಿ ಹೇಳಿದರು. ಯಾವಾಗ ಇಡಿ ಎಂಟ್ರಿ ಆಯ್ತು.  ಹಗರಣ ನಡೆದಿದೆ ಎಂದು ಒಪ್ಪಿಕೊಂಡರು. ಹಗರಣ ನಡೆದಿದೆ ಇದರಲ್ಲಿ ನಮ್ಮದೇನು ತಪ್ಪಿದೆ ಎಂದು ಹೇಳಿದ್ದಾರೆ. ಪ್ರತಿ ತಿಂಗಳು ಪ್ರಿನ್ಸಿಪಾಲ್ ಸೆಕ್ರೆಟ್ರೇರಿ ರಿವಿವ್ ಮೀಟಿಂಗ್ ಮಾಡ್ತಾರೆ. ಆಗ ನಿಮಗೆ ಹಗರಣ ಬಗ್ಗೆ ಮಾಹಿತಿ ತಿಳಿಲಿಲ್ವಾ.? ಮುಖ್ಯ ಕಾರ್ಯದರ್ಶಿಗಳು ಸಭೆ ಮಾಡುವಾಗಲು ನಿಮ್ಮ ಗಮನಕ್ಕೆ ಬರಲಿಲ್ವ. ಮುಖ್ಯ ಕಾರ್ಯದರ್ಶಿಗಳು ಇದನ್ನ ನಿಮಗೆ ಹೇಳಲಿಲ್ವ. ಬಜೆಟ್ ಸಂದರ್ಭದಲ್ಲದರೂ ಇದನ್ನ ಕೇಳಿದ್ರೆ ನಿಮಗೆ ಹಗರಣ ಗೊತ್ತಾಗುತ್ತಿತ್ತು. ನೀವು ಅದನ್ನ ಮಾಡಲಿಲ್ಲ, ಈ ಹಗರಣದಲ್ಲಿ ನೀವೆಲ್ಲ ಭಾಗಿಯಾಗಿದ್ದೀರಾ. ಪೆಟ್ರೋಲ್ ಬಂಕ್ ಸೇರಿದಂತೆ ವಿವಿಧ ಕಡೆಯಿಂದ ತೆಲಂಗಾಣ ಚುನಾವಣೆಗೆ ನಮ್ಮ ರಾಜ್ಯದ ಹಣ ಹೋಗಿದೆ. ಹೀಗಿದ್ದರೂ ಈಗಲೂ ಕೂಡ ಸಿಎಂ ನಮ್ಮ ಪಾತ್ರ ಏನಿಲ್ಲ ಎಂದು ಹೇಳುತ್ತಿದ್ದಾರೆ. ವಾಲ್ಮೀಕಿ ಹಗರಣ ತನಿಖೆ ಒಂದು ಹಂತಕ್ಕೆ ಬಂದಿದೆ. ಬ್ಯಾಂಕ್ ಅಧಿಕಾರಿಗಳು ಕೂಡ ಸಿಬಿಐಗೆ ವಹಿಸುವಂತೆ ಮನವಿ ಮಾಡಿದ್ದಾರೆ. ನಾವು ಕೂಡ ಈ ಹಗರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೋಯುತ್ತೇವೆ. ಈ ಹಗರಣ ಕುರಿತು ಸಾಕಷ್ಟು ಮಾಹಿತಿಯನ್ನ ಸಿಎಂಗೆ ನೀಡಿದ್ದೇನೆ. ಸಿಎಂ ನಾನು ಯಾವುದೇ ಮಾಹಿತಿ ಕೊಟ್ಟಿಲ್ಲ ಎಂದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರ್ ಅಶೋಕ್ ಕಿಡಿಕಾರಿದರು.

ನೀವು ಕ್ಲೀನ್, ತೆರೆದ ಪುಸ್ತಕ ಅಂದ್ರೆ ಕೆಂಪಣ್ಣ ಆಯೋಗ ಒಮ್ಮೆ ತೆರೆದು ಬಿಡಿ.

ಮುಡಾ ಹಗರಣ ವಿಚಾರವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಇದರಲ್ಲಿ ನಮ್ಮ ಪಾತ್ರ ಏನಿಲ್ಲ ಎಂದು ಹೇಳ್ತಿದೀರಾ. ಆಗಿದ್ರೆ ನಮಗಿಂತ ಮುಂಚೆ ನೀವೇಕೆ ಬಾಯಿ ಬಡಿದುಕೊಂಡು ಹೋಗುತ್ತಿದ್ದೀರಾ. ಮುಡಾ ಹಗರಣದಂತೆ ರೀಡೂ ಹಗರಣ ಕೂಡ. ನೀವು ಕ್ಲಿನ್, ತೆರೆದ ಪುಸ್ತಕ ಅಂದ್ರೆ ಕೆಂಪಣ್ಣ ಆಯೋಗ ಒಮ್ಮೆ ತೆರೆದು ಬಿಡಿ. ಕೆಂಪಣ್ಣ ಆಯೋಗನೆ ಮುಗಿದಿಲ್ಲ, ಈಗ ದೇಸಾಯಿ ಆಯೋಗ ಬೇರೆ. ಇದಕ್ಕೆ ಇನ್ನೆಷ್ಟು ವರ್ಷ ತೆಗೆದುಕೊಳ್ಳುತ್ತೀರಾ ಹೇಳಿ ಎಂದು ಪ್ರಶ್ನಿಸಿದರು.

ಸದನದಲ್ಲಿ ಮಾತನಾಡಿದ್ರೆ ಏಟಿಗೆ ಎದುರೇಟು ಕೊಡುತ್ತಿದ್ದೆವು.

ಮುಡಾ ಹಗರಣ ವಿರುದ್ಧ ನಾವು ಜೆಡಿಎಸ್ ಪಾದಯಾತ್ರೆ ಮಾಡುತ್ತಿದ್ದೇವೆ. ನಿಮ್ಮದೇ ಪಕ್ಷದ ಅಧ್ಯಕ್ಷ ಮರೀಗೌಡ ಮುಡಾ ಹಗರಣ ಬಗ್ಗೆ ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆಗಿದ್ರೆ ನಿಮ್ಮ ಪಕ್ಷದ ನಾಯಕ ಸುಳ್ಳು ಹೇಳುತ್ತಿದ್ದಾರಾ. ವಿಧಾನಸಭೆಯಲ್ಲಿ ಒಮ್ಮೆ ನಿಂತು ನಮ್ಮ ಪ್ರಶ್ನೆಗೆ ಉತ್ತರ ಹೇಳ್ತಿದ್ದಿರಿ. ಆದರೆ ಸದನದಲ್ಲಿ ತಪ್ಪಿಸಿಕೊಂಡು ಓಡ್ತೀರಾ, ಆಚೆ ಬಂದು ಪ್ರೆಸ್ ಮೀಟ್ ಮಾಡ್ತೀರಾ. ಸದನದಲ್ಲಿ ಮಾತನಾಡಿದ್ರೆ ಏಟಿಗೆ ಎದುರೇಟು ಕೊಡುತ್ತಿದ್ದೆವು ಎಂದು ಆರ್.ಅಶೋಕ್ ಚಾಟಿ ಬೀಸಿದರು.

ಅಬ್ರಹಾಂ ನನ್ನ ಬ್ಲಾಕ್ ಮೇಲರ್ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಜಂತಕಲ್ ಮೈನಿಂಗ್ ಕೇಸ್ ಹಾಕಿದಾಗ ಅಬ್ರಹಾಂ ಹಾಕಿರುವ ಕೇಸ್ ಸರಿ ಇದೆ ಎಂದು ಹೇಳಿದ್ರಿ. ಆಗಿದ್ರೆ ಸುಪ್ರೀಂ ಕೋರ್ಟ್ ನಲ್ಲಿ ಯಡಿಯೂರಪ್ಪ ಕೇಸ್ ಇದಿಯಲ್ಲ ವಾಪಾಸ್ ತಗೋತೀರಾ. ಬಿಜೆಪಿ ವಿರುದ್ಧ ಅಬ್ರಹಾಂ ಆರೋಪ ಮಾಡಿದ್ರೆ ಸರಿ. ಸಿದ್ದರಾಮಯ್ಯ ಮೇಲೆ ಆರೋಪ ಮಾಡಿದ್ರೆ ಆತ ಬ್ಲಾಕ್ ಮೇಲರ್ ಅಂತೀರಾ ಎಂದು ಟೀಕಿಸಿದರು.

Key words: corrupt, afraid, CBI, R. Ashok, CM Siddaramaiah

Tags :
afraidCBICM SiddaramaiahcorruptR.ashok
Next Article