ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಸತ್ಯ: ಸಿಎಂ ಪತ್ನಿ ಹೆಸರಿನಲ್ಲೂ ಅಕ್ರಮ ನಿವೇಶನ ವರ್ಗಾವಣೆ –ಆರ್.ಟಿಐ ಕಾರ್ಯಕರ್ತ
ಮೈಸೂರು,ಜುಲೈ,1,2024 (www.justkannada.in): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರೋದು ಸತ್ಯ. ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಹೆಸರಿನಲ್ಲೂ ಅಕ್ರಮ ನಿವೇಶನ ವರ್ಗಾವಣೆ ಆಗಿದೆ ಎಂದು ಆರ್ ಟಿಐ ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ.
ಇಂದು ಈ ಕುರಿತು ಮಾತನಾಡಿದ ಆರ್ ಟಿಐ ಕಾರ್ಯಕರ್ತ ಗಂಗರಾಜು, ಇದು ಇಂದು ನಿನ್ನೆಯದಲ್ಲ ಹಲವು ವರ್ಷಗಳಿಂದ ಅಕ್ರಮ ದಂಧೆ ನಡೆಯುತ್ತಿದೆ. ಇದರಲ್ಲಿ ಹಿಂದಿನ ಆಯುಕ್ತ ನಟೇಶ್ ಮತ್ತು ಮುಡಾ ಅಧ್ಯಕ್ಷರಾಗಿದ್ದ ಎಚ್.ವಿ ರಾಜೀವ್ ಕೈವಾಡ ಕೂಡ ಇದೆ. ಅಕ್ರಮದಲ್ಲಿ ಇನ್ನೂ ಹಲವು ತಿಮಿಂಗಿಲಗಳಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಹೆಸರಿನಲ್ಲೂ ಅಕ್ರಮ ನಿವೇಶನ ವರ್ಗಾವಣೆ ಆಗಿದೆ. ಉಳ್ಳವರ ಪರವಾಗಿ ಅಕ್ರಮ ಸೈಟು ಹಂಚಿಕೆ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಇಲ್ಲಿ ಈಗಿನ ಆಯುಕ್ತ ದಿನೇಶ್ ಜೊತೆ ಯಾರೆಲ್ಲಾ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅವರ ತಲೆತಂಡವಾಗಬೇಕು. ಈ ಪ್ರಕರಣವನ್ನ ಎಸ್ಐಟಿ ವಹಿಸುವ ಬದಲು ಸಿಬಿಐಗೆ ವಹಿಸಬೇಕು ಸಿಐಡಿ, ಎಸ್ಐಟಿ ಇವುಗಳಗೆ ವಹಿಸಿದರೂ ಸತ್ಯ ಬಯಲಾಗೊಲ್ಲ. ಎಲ್ಲಾ ಮುಚ್ಚಿಹೋಗುತ್ತೆ ಎಂದು ಆರ್ಟಿಐ ಕಾರ್ಯಕರ್ತ ಗಂಗರಾಜು ಹೇಳಿದರು.
Key words: corruption, Muda, RTI, activist