For the best experience, open
https://m.justkannada.in
on your mobile browser.

MUDA ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ: ಸಿಬಿಐ ತನಿಖೆಗೆ ಸಿ.ಟಿ ರವಿ ಆಗ್ರಹ

11:08 AM Jul 01, 2024 IST | prashanth
muda ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ  ಸಿಬಿಐ ತನಿಖೆಗೆ ಸಿ ಟಿ ರವಿ ಆಗ್ರಹ

ಮೈಸೂರು,ಜುಲೈ,1,2024 (www.justkannada.in):  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಯಾರು ತಪ್ಪಿತಸ್ಥರಿದ್ದಾರೆ ಅವರ ತಲೆದಂಡವಾಗಬೇಕು. ಈ ಬಗ್ಗೆ ಸಿಬಿಐ ತನಿಖೆಯಾಗಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಸಿಎಂ ಸಿದ್ದರಾಮಯ್ಯನವರ ಮೂಗಿನ‌ಡಿ ಎರಡುವರೆ ಸಾವಿರ ಕೋಟಿಯಷ್ಟು ಸರ್ಕಾರಿ ಆಸ್ತಿ ದುರುಪಯೋಗ ಆಗಿದೆ ಎಂಬ ವಿಚಾರ ಕೇಳಿ ದಿಗ್ಬ್ರಮೆಯಾಯಿತು. ಬಡವರಿಗೆ ದಲಿತರಿಗೆ ಕೊಡಲಿಕ್ಕೆ ಇವರಿಗೆ ನಿವೇಶನಗಳಿಲ್ಲ,ಕಳ್ಳರು ಕಾಕರಿಗೆ ಬೇನಾಮಿಯಾಗಿ ಕೊಡಲಿಕ್ಕೆ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು, ಇದರಲ್ಲಿ ಯಾರು ತಪ್ಪಿತಸ್ಥರಿದ್ದಾರೆ ಅವರ ತಲೆದಂಡವಾಗಬೇಕು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಉಗ್ರ ಹೋರಾಟ ರೂಪಿಸುತ್ತೇವೆ. ಇದು ಒಂದು ಮಹಾ ಮೋಸ ಕಳ್ಳರು ಕಾಕರು ಲೂಟಿ ಹೊಡೆಯಲಿಕ್ಕೆ ಈ ಸಂಸ್ಥೆಯನ್ನ ಬಳಸಿಕೊಂಡಿದ್ದಾರೆ. ಇದರಲ್ಲಿ ದೊಡ್ಡವರ ಕೃಪಾಕಟಾಕ್ಷ ಇದೆ. ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇಂತಹ ಹಗರಣಗಳು ಮೈಸೂರು ಒಂದರಲ್ಲೋ ಅಥವಾ ರಾಜ್ಯದ ಎಲ್ಲಾ ಕಡೆ ನಡೆದಿದೆಯೋ ಎನ್ನುವುದನ್ನೂ ತಿಳಿಯಬೇಕು ಇದೊಂದು ಕತರ್ನಾಕ್ ಗ್ಯಾಂಗ್ ಚಾರ್ಲ್ ಶೋಬರಾಜ್ ಅವರಿಗಿಂತ ಕತರ್ನಾಕ್ ಗ್ಯಾಂಗ್ ಎಂದು ಕಿಡಿಕಾರಿದರು.

ಚಂದ್ರಶೇಖರ ಸ್ವಾಮೀಜಿ ಬಗ್ಗೆ ಸಚಿವ ರಾಜಣ್ಣ ಹಗುರ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿ.ಟಿ ರವಿ, ನಾನು ಆ ವಿವಾದದ ಬಗ್ಗೆ ಪ್ರತಿಕ್ರಿಯಿಸಲಿಕ್ಕೆ ಬಯಸಲ್ಲ. ಇದು ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ. ರಾಜ್ಯದಲ್ಲಿ ಬೆಲೆ ಏರಿಕೆ, ಹಣದುಬ್ಬರದಿಂದ ಜನ ತತ್ತರಿಸಿದ್ದಾರೆ. ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿರುವ ಮಾನ್ಯ ಸಿಎಂ ಸಿದ್ದರಾಮಯ್ಯ ಹೇಳಬೇಕು. ಎಕನಾಮಿಕ್ಸ್ ಎನ್ನುವುದನ್ನು ಸಿದ್ರಾಮಿಕ್ಸ್ ಅಂತ ಮಾಡಬೇಕು. ಇವರ ಕಲ್ಯಾಣ ರಾಜ್ಯದಲ್ಲಿ ಬೆಲೆಗಳು ಗಗನಕ್ಕೇರಿವೆ. ಎಸ್ಇಪಿ, ಟಿಎಸ್ ಪಿ ಹಣವನ್ನೂ  ದುರುಪಯೋಗ ಮಾಡಿಕೊಂಡಿದ್ದಾರೆ. ಜನರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಬದಲು ಜಾತಿಗೊಂಡು ಡಿಸಿಎಂ ಮಾಡಬೇಕು, ಅವರು ಸಿಎಂ ಆಗಬೇಕು ಇವರು ಸಿಎಂ ಆಗಬೇಕು ಅಂತ ಒಬ್ಬರಿಗೊಬ್ಬರು ದ್ವೇಷ ಕಾರುತ್ತಿದ್ದಾರೆ ಇದೇನಾ ಇವರು ಸಂವಿಧಾನ ಪಾಲಿಸೋದು.?  ಎಂದು  ಕಾಂಗ್ರೆಸ್ ಸರ್ಕಾರ ಮತ್ತು ಕೈ ನಾಯಕರ ವಿರುದ್ಧ ಸಿಟಿ ರವಿ  ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಗೆ ಸ್ಪಷ್ಟ ಬಹುಮತವೇನು ಇದೆ, ವಿಶ್ವಾಸ ಮತ ಇಲ್ಲ

ಕಾಂಗ್ರೆಸ್ ಗೆ ಸ್ಪಷ್ಟ ಬಹುಮತವೇನು ಇದೆ, ವಿಶ್ವಾಸ ಮತ ಇಲ್ಲ. ವಿಶ್ವಾಸ ಮತ ಇಲ್ಲದೆ ಇರುವುದರಿಂದದ ಅಭದ್ರತೆ ಕಾಡುತ್ತಿದೆ. ರಾಜ್ಯದ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಪಕ್ಷದ ಶಾಸಕರ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಕೆಲವು ಮಂತ್ರಿಗಳು ಬಿರಿಯಾನಿ ತಿನ್ನುತ್ತಿದ್ದಾರೆ. ನಮಗೆ ಚಿತ್ರಾನ್ನ ಮೊಸರನ್ನ ಅಂತ ಕೆಲವರಿಗೆ ಸಚಿವರಿಗೆ ದುಃಖ. ಇನ್ನೂ ಶಾಸಕರು ನಮಗೆ  ಚಿತ್ರನ್ನನೂ ಇಲ್ಲ ಮೊಸರನ್ನೂ ಇಲ್ಲ ಎನ್ನುವ ದುಃಖ. ಸರ್ಕಾರ ಬೀಳುತ್ತೋ  ಏನೋ ಗೊತ್ತಿಲ್ಲ ಮನೆ ಹಾಳು ಮಾಡುವ ಕೆಲಸ ನಿಲ್ಲಿಸಿ ಅಂತ ಹೇಳಲಿಕ್ಕೆ ಬಯಸುತ್ತೇನೆ ಎಂದು ಸಿಟಿ ರವಿ ಹರಿಹಾಯ್ದರು.

Key words: Corruption,MUDA, CT Ravi, CBI

Tags :

.