For the best experience, open
https://m.justkannada.in
on your mobile browser.

ಮೇಲ್ಮನೆಗೆ ಚುನಾವಣೆ ಘೋಷಣೆ : ಡಾ. ಯತೀಂದ್ರ ಸಿದ್ದರಾಮಯ್ಯ ಎಂಎಲ್ಸಿ ಆಗೋದು ಬಹುತೇಕ ಖಚಿತ.

04:36 PM May 20, 2024 IST | mahesh
ಮೇಲ್ಮನೆಗೆ ಚುನಾವಣೆ ಘೋಷಣೆ   ಡಾ  ಯತೀಂದ್ರ ಸಿದ್ದರಾಮಯ್ಯ ಎಂಎಲ್ಸಿ ಆಗೋದು ಬಹುತೇಕ ಖಚಿತ

ಬೆಂಗಳೂರು, ಮೇ.20, 2024: (www.justkannada.in news) ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 12 ಸದಸ್ಯರ ಆಯ್ಕೆ ಸಂಬಂಧ ಚುನಾವಣೆಗೆ ದಿನಾಂಕ ಪ್ರಕಟ.

ಮೇ ೨೭ ರಂದು ಚುನಾವಣೆ ಸಂಬಂದ ಅಧಿಸೂಚನೆ. ಜೂ. ೦೩ ರಂದು ನಾಮಪತ್ರ ಸಲ್ಲಿಕೆಗೆ ಕಡೆ ದಿನ. ಜೂ.೦೪ ಕ್ಕೆ ನಾಮಪತ್ರ ಪರಿಶೀಲನೆ. ಜೂ. ೦೬ ನಾಮಪತ್ರ ಹಿಂಪಡೆಯಲು ಕಡೆಯ ದಿನ. ಜೂ. ೧೩ ಕ್ಕೆ ಚುನಾವಣೆ. ಬೆಳಗ್ಗೆ ೯ ರಿಂದ ಸಂಜೆ ೪ ರ ತನಕ ಮತದಾನಕ್ಕೆ ಅವಕಾಶ.

ಜೂ. ೧೩ ರಂದೇ ಮತ ಎಣಿಕೆ. ಅಂದು ಸಂಜೆ ೫ ಗಂಟೆಗೆ ಮತ ಎಣಿಕೆ ಆರಂಭ.

ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ೬ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಕಾರ್ಯ ಮುಗಿದು, ನಾಮಪತ್ರ ಹಿಂದಕ್ಕೆ ಪಡೆಯಲು ಇಂದು ಕೊನೆಯ ದಿನ. ಇದೀಗ ಮೇಲ್ಮನೆಗೆ, ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ 12 ಸದಸ್ಯರ ಆಯ್ಕೆ ಸಂಬಂಧ ಚುನಾವಣೆಗೆ ದಿನಾಂಕ ಘೋಷಣೆ.

ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಬಿಜೆಪಿ- ಜೆಡಿಎಸ್‌ ಈ ಮೂರೂ ಪಕ್ಷಗಳಲ್ಲೂ ಈಗ ಮತ್ತೆ ಪೈಪೋಟಿ .

ಡಾ. ಯತೀಂದ್ರ ಮೇಲ್ಮನೆಗೆ :

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ 11 ಸದಸ್ಯರ ಅವಧಿ ಜೂನ್ 17ಕ್ಕೆ ಕೊನೆ ಗೊಳ್ಳಲಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಸಿಗುವ ಏಳು ಸ್ಥಾನಗಳಲ್ಲಿ ಮೊದಲನೇ ಆಯ್ಕೆಯಾಗಿ ಯತೀಂದ್ರ ಸಿದ್ದರಾಮಯ್ಯ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ. ಗೋವಿಂದರಾಜ್ ಮತ್ತು ಬೋಸರಾಜ್ ವರಿಷ್ಠರ ಮನವೊಲಿಸಿ ಮತ್ತೊಂದು ಅವಧಿಗೆ ಮುಂದುವರೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಮೇಲ್ಮನೆಗೆ  ಆಯ್ಕೆ ಮಾಡಲು ನಾಯಕರು ಉತ್ಸುಕವಾಗಿದ್ದಾರೆ. ಈ ನಿಟ್ಟಿನಲ್ಲಿ ಹೈಕಮಾಂಡ್‌  ಸೇರಿದಂತೆ ರಾಜ್ಯ ನಾಯಕರು ಒಲವು ವ್ಯಕ್ತಪಡಿಸಿದ್ದು ಡಾ.ಯತೀಂದ್ರ ಆಯ್ಕೆ ಬಹುತೇಕ ಖಚಿತ.

ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿರುವ ಸ್ಥಾನದ ಅವಧಿ 2028ರ ಜೂನ್ 14ರವರೆಗೂ ಇದ್ದು, ಆ ಸ್ಥಾನದ ಭರ್ತಿಗೂ ಈಗ ಉಪ ಚುನಾವಣೆ ನಡೆಯಲಿದೆ.

ಯಾರ್ಯಾರಿಗೆ ಎಷ್ಟೆಷ್ಟು..?

ವಿಧಾನಸಭೆ ಬಲಾಬಲದ ಪ್ರಕಾರ, ಮೊದಲ 11 ಸ್ಥಾನಗಳಲ್ಲಿ ಏಳು ಕಾಂಗ್ರೆಸ್ ಪಾಲಾಗಲಿವೆ. ಬಿಜೆಪಿಗೆ ಮೂರು, ಜೆಡಿಎಸ್‌ಗೆ ಒಂದು ಸ್ಥಾನ ದೊರಕಲಿವೆ. ಶೆಟ್ಟರ್ ಪ್ರತಿನಿಧಿಸುತ್ತಿದ್ದ ಸ್ಥಾನ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಹೋಗಲಿದೆ.

ಆಕಾಂಕ್ಷಿಗಳ್ಯಾರು :

ಕಾಂಗ್ರೆಸ್ :

ಸಚಿವ ಎನ್.ಎಸ್.ಬೋಸರಾಜ್, ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್, ಅರವಿಂದ ಕುಮಾರ್ ಅರಳಿ ಮತ್ತು ಕೆ. ಹರೀಶ್ ಕುಮಾರ್ ಜೂನ್ 17ಕ್ಕೆ ನಿವೃತ್ತರಾಗುತ್ತಿದ್ದಾರೆ.

ರಮೇಶ್ ಬಾಬು, ವಿನಯ್ ಕಾರ್ತಿಕ್, ವಿಜಯ್ ಕೆ. ಮುಳುಗುಂದ್, ಪಿ.ವಿ. ಮೋಹನ್, ಬಿ.ವಿ. ಶ್ರೀನಿವಾಸ್, ಸೂರಜ್ ಹೆಗ್ಡೆ, ವಕೀಲ ಸಿ.ಎಸ್. ದ್ವಾರಕಾನಾಥ್ ಅವರು ವಿಧಾನಸಭೆಯಿಂದ ವಿಧಾನ ಪರಿಷತ್ ಪ್ರವೇಶಿಸುವ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕವಿತಾ ರೆಡ್ಡಿ, ಆರತಿ ಕೃಷ್ಣ, ಮಹದೇವಪುರದ ಕಮಲಾಕ್ಷಿ ರಾಜಣ್ಣ ಮಹಿಳಾ ಕೋಟಾದಡಿ ಆಕಾಂಕ್ಷಿಗಳು.

ಜೆಡಿಎಸ್‌ :

ಜೆಡಿಎಸ್‌ ಸದಸ್ಯ ಬಿ.ಎಂ.ಫಾರೂಕ್ ಜೂನ್ 17 ಕ್ಕೆ ನಿವೃತ್ತರಾಗುತ್ತಾರೆ. ಪಕ್ಷಕ್ಕೆ ಒಂದೇ ಸ್ಥಾನ ದೊರಕಲಿದ್ದು, ದೇವೇಗೌಡ ಕುಟುಂಬಕ್ಕೆ ನಿಕಟರಾಗಿರುವ ಕಾರಣ ಅವರೇ ಮತ್ತೆ  ಪುನರಾಯ್ಕೆಯಾಗುವರು ಎನ್ನಲಾಗಿದೆ.  ಈ ನಡುವೆ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋತಿರುವ ಟಿ.ಎನ್. ಜವರಾಯಿಗೌಡ ಮತ್ತು ರಾಜ್ಯಸಭೆಯ ಮಾಜಿ ಸದಸ್ಯ ಡಿ.ಕುಪೇಂದ್ರ ರೆಡ್ಡಿ  ಸಹ ಜೆಡಿಎಸ್‌ನಿಂದ ಮೇಲ್ಮನೆಗೆ  ಆಯ್ಕೆ ಬಯಸಿದ್ದಾರೆ.

ಬಿಜೆಪಿ: 

ಬಿಜೆಪಿಯಲ್ಲಿ ಆರು ಸದಸ್ಯರ ಅವಧಿ ಮುಗಿಯುತ್ತಿದೆ. ನಾಲ್ವರು ಮಾತ್ರ ಪಕ್ಷದಲ್ಲಿದ್ದಾರೆ. ರಘುನಾಥ್ ರಾವ್ ಮಲ್ಕಾಪೂರೆ, ಎನ್. ರವಿಕುಮಾರ್, ಎಸ್. ರುದ್ರೇಗೌಡ, ಪಿ.ಎ.ಮುನಿರಾಜುಗೌಡ ನಿವೃತ್ತ ರಾಗುತ್ತಿದ್ದಾರೆ. ಈ ಪೈಕಿ ರವಿಕುಮಾರ್ ಅವರಿಗೆ ಮತ್ತೊಂದು ಅವಧಿಗೆ ಅವಕಾಶ ದೊರಕುವ ಸಾಧ್ಯತೆ ಇದೆ. ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಸಿ.ಟಿ. ರವಿ, ಜೆ.ಸಿ.ಮಾಧುಸ್ವಾಮಿ ಅವರನ್ನು ಮೇಲ್ಮನೆಗೆ ಕರೆತರುವ ಪ್ರಯತ್ನ ಪಕ್ಷದಲ್ಲಿ ನಡೆದಿದೆ. ಹೊಸಬರಿಗೂ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

key words:  The dates for the election, of 12 members to the Legislative Council, from the Legislative Assembly, have been announced.

 summary: 

Yathindra Siddaramaiah is likely to be considered as the first choice among the seven seats the Congress will get. Govindaraj and Boseraj are said to be trying to persuade the top brass to continue for another term.

According to the strength of the Assembly, seven of the top 11 seats will go to the Congress. The BJP will get three seats and the JD(S) one. The seat represented by Shettar will go back to the Congress.

.