For the best experience, open
https://m.justkannada.in
on your mobile browser.

ವಿಧಾನಸೌಧದ ಮುಂಭಾಗದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ದಂಪತಿ.

01:09 PM Jan 10, 2024 IST | prashanth
ವಿಧಾನಸೌಧದ ಮುಂಭಾಗದಲ್ಲೇ ಆತ್ಮಹತ್ಯೆಗೆ ಯತ್ನಿಸಿದ ದಂಪತಿ

ಬೆಂಗಳೂರು, ಜನವರಿ 10,2024(www.justkannada.in):  ವಿಧಾನಸೌಧದ ಮುಂಭಾಗದಲ್ಲೇ ದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಇಂದು ನಡೆದಿದೆ.

ಜೆಜೆ ನಗರದ ಶಾಯಿಸ್ತಾ ದಂಪತಿ ಆತ್ಮಹತ್ಯೆಗೆ ಯತ್ನಿಸಿದವರು. ಶಾಯಿಸ್ತಾ ಬ್ಯಾಂಕ್‌ನಿಂದ ಸಾಲಪಡೆದಿದ್ದರು. ಸಾಲ ಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್​ನವರು ಜಮೀನು ಹರಾಜು ಹಾಕಿದ್ದರು. ಇದರಿಂದ ಮನನೊಂದು ​​ಶಾಯಿಸ್ತಾ ದಂಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಕೂಡಲೆ ದಂಪತಿಯನ್ನು ತಡೆದಿದ್ದಾರೆ.

ಶಾಯಿಸ್ತಾ ಬಿತ್ತಿ ಪತ್ರಗಳನ್ನು ಹಿಡಿದುಕೊಂಡು ನಮ್ಮ ರಕ್ಷಣೆಗೆ ಯಾರೂ ಕೂಡ ಬಂದಿಲ್ಲ. ಬ್ಯಾಂಕ್‌ನಿಂದ ಕಿರುಕುಳವಾಗಿದೆ. ನಮಗೆ ನ್ಯಾಯ ಬೇಕು. ನ್ಯಾಯ ಸಿಗುವವರೆಗೂ ಹೋಗುವುದಿಲ್ಲ. ಇಡೀ ಕುಟುಂಬ ಬೀದಿಗೆ ಬಂದಿದೆ. ನಮಗೆ ಸಾಕಷ್ಟು ಕಿರುಕುಳ ನೀಡಲಾಗಿದೆ ಎಂದು ಕೂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮಹಿಳಾ ಪೊಲೀಸರು ಶಾಯಿಸ್ತಾ ಅವರನ್ನು ತಡೆದು ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.

Key words:  couple -tried -commit suicide- in front -Vidhana Soudha.

Tags :

.