For the best experience, open
https://m.justkannada.in
on your mobile browser.

ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪಿಗೆ ದಂಡ ವಿಧಿಸಿದ ಕೋರ್ಟ್

05:14 PM Aug 28, 2024 IST | prashanth
ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಆರೋಪಿಗೆ ದಂಡ ವಿಧಿಸಿದ ಕೋರ್ಟ್

ಚಾಮರಾಜನಗರ,ಆಗಸ್ಟ್,28,2024 (www.justkannada.in): ಅಕ್ರಮ ವಿದ್ಯುತ್ ಸಂಪರ್ಕ/ಕಳ್ಳತನ ಅಪರಾಧಕ್ಕೆ ಸಂಬಂಧಿಸಿದಂತೆ ಆರೋಪಿಗೆ 5 ಸಾವಿರ ರೂ. ದಂಡ ವಿಧಿಸಿ ಕೊಳ್ಳೇಗಾಲದ ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಹನೂರು ತಾಲ್ಲೂಕಿನ ಕಿರೇಪಾತಿ ಬೋರೆ ಗ್ರಾಮದ ಆರೋಪಿ ಕುಪ್ಪುಸ್ವಾಮಿಗೆ ಕೋರ್ಟ್ ದಂಡ ವಿಧಿಸಿದೆ.

ಕುಪ್ಪುಸ್ವಾಮಿ ಎಂಬುವವರು ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡು ಮುನ್ನೆಚ್ಚರಿಕೆ ಕ್ರಮ ವಹಿಸದೇ ನಿರ್ಲಕ್ಷ್ಯ ಮಾಡಿ ವಿದ್ಯುತ್ ವೈರನ್ನು ಸುರಕ್ಷತೆ ಅನುಸರಿಸದೇ ಕೆಳಗೆ ಬಿಟ್ಟಿದ್ದರು.  ದಿನಾಂಕ:06/07/2020 ರಂದು ಪಕ್ಕದ ಮನೆಯ ನವಿತಾ ಎಂಬುವವರು ವೈರಿಗೆ ಸಿಲುಕಿ ಮೃತಪಟ್ಟ ಬಗ್ಗೆ ರಾಮಾಪುರ ಪೊಲೀಸರು ಕ್ರೈಂ ನಂ.61/2020 ರಂತೆ ಪ್ರಕರಣ ದಾಖಲಿಸಿಕೊಂಡು ಘನ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕೊಳ್ಳೇಗಾಲ ನ್ಯಾಯಾಲಯಕ್ಕೆ ಐಪಿಸಿ ಕಲಂ 304ಎ ಮತ್ತು ವಿದ್ಯುಚ್ಚಕ್ತಿ ಕಾಯಿದೆ ಕಲಂ 135 138 ರಡಿ ದೋಷರೂಪಣಾ ಪತ್ರವನ್ನು ಸಲ್ಲಿಸಿದ್ದರು.

ಅದು ಸ್ಪೆಷಲ್ ಕೇಸ್ ನಂ.5009/2021 ರಂತೆ ದಾಖಲಾಗಿದ್ದು, ಈ ಪ್ರಕರಣದಲ್ಲಿ ಐಪಿಸಿ ಕಲಂ 304ಎ ರಡಿ ಸಾಕಷ್ಟು ಸಾಕ್ಷ್ಯವಿಲ್ಲವೆಂದು ಆರೋಪಿ ಕುಪ್ಪುಸ್ವಾಮಿಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದು ವಿದ್ಯುತ್ ಕಳ್ಳತನ ಮಾಡಿದ್ದಕ್ಕಾಗಿ ವಿದ್ಯುಚ್ಛಕ್ತಿ ಕಾಯಿದೆ 2003 ರ ಕಲಂ 135 ಅಡಿ ದೋಷಿ ಎಂದು ಕೋರ್ಟ್ ಘೋಷಿಸಿತು. ಅಲ್ಲದೆ ಆರೋಪಿಗೆ ರೂ.5,000/- ದಂಡ ವಿಧಿಸಿದ್ದು,  ದಂಡ ಪಾವತಿಸಲು ವಿಫಲರಾದರೆ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ಕೋರ್ಟ್ ಆದೇಶಿಸಿದೆ. ಮೃತಳ ಪೋಷಕರಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕೋರಲಾಗಿದೆ.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ ರವರು ವಾದ ಮಂಡಿಸಿದರು.

Key words: court,  fined, accused, illegal electricity, connection

Tags :

.